Tuesday, February 3, 2026
Google search engine

Homeರಾಜ್ಯಸುದ್ದಿಜಾಲಬಾಲ್ಯದಲ್ಲೇ ಪುಸ್ತಕ ಓದಿನ ಹವ್ಯಾಸ ಬೆಳೆಸಿ ಸಮಗ್ರ ವ್ಯಕ್ತಿತ್ವ ನಿರ್ಮಿಸಿಕೊಳ್ಳಿ – ಎಸ್‌ಪಿ ಸ್ನೇಹ ರಾಜ್

ಬಾಲ್ಯದಲ್ಲೇ ಪುಸ್ತಕ ಓದಿನ ಹವ್ಯಾಸ ಬೆಳೆಸಿ ಸಮಗ್ರ ವ್ಯಕ್ತಿತ್ವ ನಿರ್ಮಿಸಿಕೊಳ್ಳಿ – ಎಸ್‌ಪಿ ಸ್ನೇಹ ರಾಜ್

ಚಾಮರಾಜನಗರ: ಬಾಲ್ಯದಿಂದಲೂ ಉತ್ತಮ ಕಥೆ ಪುಸ್ತಕಗಳನ್ನು ಅಧ್ಯಯನ ಮಾಡಿ ಸಮಗ್ರ ವಿಕಾಸಕ್ಕೆ ಬುನಾದಿ ಹಾಕಿಕೊಳ್ಳಬೇಕು. ಶಿಕ್ಷಣ, ಕಲೆ ಸಾಹಿತ್ಯ, ಸಂಗೀತ, ನೃತ್ಯ ,ನಾಟಕ ಚಿತ್ರಕಲೆ ,ವಿವಿಧ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂದು ಪೊಲೀಸ್ ಅಧೀಕ್ಷಕರಾದ ಸ್ನೇಹ ರಾಜ್ ರವರು ತಿಳಿಸಿದರು.

ಅವರು ಯೂಥ್ ಫಾರ್ ಸೇವಾ ಸಂಸ್ಥೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಚಿಗುರು 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಧನೆ ಮಾಡಿರುವ ಎಲ್ಲರಿಗೂ ಬಾಲ್ಯದ ನೆನಪು ಸದಾ ಅಮರವಾಗಿರುತ್ತದೆ. ತಂದೆ ತಾಯಿ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಮಕ್ಕಳ ವಿಕಾಸ ಉಂಟಾಗಿ ಬೆಳವಣಿಗೆಗೆ ಸಹಾಯಕವಾಗುತ್ತದೆ. ನೂರಾರು ಉತ್ತಮ ಕಥೆಯ ಪುಸ್ತಕಗಳು ಇದ್ದು ಅವುಗಳನ್ನು ಸಂಗ್ರಹಿಸಿ ಓದಬೇಕು . ಪೋಷಕರು ಪುಸ್ತಕಗಳನ್ನು ತಾವು ಓದಿ ಮಕ್ಕಳು ಓದುವಂತೆ ಮಾಡುವುದು ಬಹಳ ಒಳ್ಳೆಯದು. ಪುಸ್ತಕಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಪ್ರೇರಕರಾಗಿ, ಸ್ವ ಅಧ್ಯಯನ ದಿಂದಉನ್ನತ ಸಾಧನೆಯನ್ನು ಮಾಡಬಹುದು. ಕಲಿಕೆಗೆ ಆಸಕ್ತಿಯನ್ನು ಪುಸ್ತಕಗಳು ಹೆಚ್ಚಿಸುತ್ತದೆ. ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳನ್ನು ವಿವಿಧ 15ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಸ್ಪೂರ್ತಿ ತುಂಬಿರುವ ಯೂತ್ ಫಾರ್ ಸೇವಾ ಸಂಸ್ಥೆ ಉತ್ತಮ ಕಾರ್ಯವನ್ನು ಮಾಡಿದೆ ಎಂದು ತಿಳಿಸಿದರು .

ಉದ್ಯಮಿ ವೆಂಕಟ ನಾಗಪ್ಪ ಶೆಟ್ಟಿ ಮಾತನಾಡಿ ಸಂಸ್ಥೆ ಕಳೆದ ಐದು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಮಕ್ಕಳಿಗಾಗಿ ರೂಪಿಸಿರುವ ಚಿಗುರು ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಿಸುವುದು ಸಂಘ ಸಂಸ್ಥೆಗಳ ಪ್ರಮುಖ ಕಾರ್ಯವಾಗಿದೆ. ಪ್ರತಿಭಾನ್ವಿತರಿಗೆ ವೇದಿಕೆಗಳನ್ನು, ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ಸ್ಥಾನಮಾನವನ್ನು ಗಳಿಸಿಕೊಳ್ಳುವಂತೆ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯವನ್ನು ಯೂತ್ ಫಾರ್ ಸೇವಾ ಸಂಸ್ಥೆ ಮಾಡುತ್ತಿದೆ. ಶಿಕ್ಷಣ ಪರಿಸರ ,ಸ್ವಚ್ಛತೆ ,ಇಂಗ್ಲಿಷ್ ಕಲಿಕೆ, ವಿಜ್ಞಾನದ ಪ್ರೋತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೇವಾ ಮನೋಭಾವದಿಂದ ಯುವಶಕ್ತಿಯನ್ನು ರೂಪಿಸುತ್ತಿರುವ ಸಂಸ್ಥೆ. ಮುಂದಿನ ಯುವಶಕ್ತಿ ಆಗಿರುವ ಮಕ್ಕಳಲ್ಲಿ ತಮ್ಮಲ್ಲಿ ಅಡಗಿರುವ ಮಹಾ ಶಕ್ತಿ ಪ್ರತಿಭೆ ಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಿದೆ. ಅನೇಕ ನಟ ನಟಿಯರು ,ಕ್ರೀಡಾಪಟುಗಳು ಚಿತ್ರಕಾರರು ,ಕಲೆ, ಸಾಹಿತ್ಯ ಸಂಗೀತ ,ಕವಿ , ಗಾಯನಶ್ರೇಷ್ಠರು ಸಮಾಜಮುಖಿ ಯಾಗಿ ಸೇವೆ ಸಲ್ಲಿಸಲು ವೇದಿಕೆಗಳು ಪ್ರಮುಖ ಎಂದು ತಿಳಿಸಿದರು.

ಸ್ತ್ರೀರೋಗ ತಜ್ಞ ಡಾ. ಶ್ವೇತಾ ಶಶಿಧರ್ ಮಾತನಾಡಿ ಚಾಮರಾಜನಗರ ಜಿಲ್ಲೆ ಕಲೆಯ ಸಾಹಿತ್ಯ ,ಸಂಗೀತಕ್ಕೆ ಪ್ರಸಿದ್ಧಿಯಾಗಿದೆ. ಪ್ರತಿಭಾವಿಕಸಕ್ಕೆ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಶಿಕ್ಷಕರು ಪೋಷಕರು ನಿರಂತರವಾಗಿ ಅವರನ್ನು ಬೆಂಬಲಿಸಿ ಅವಕಾಶವನ್ನು ಕಲ್ಪಿಸಿ ಕೊಡಬೇಕು .ಸಂಘ ಸಂಸ್ಥೆಗಳು ನಿರಂತರವಾಗಿ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾಧಕರು ಹೊರಬರಬೇಕು ಚಿಗುರು ಮೂಲಕ ಸಾವಿರಾರು ಮಕ್ಕಳ ಸಂತೋಷಕ್ಕೆ ಕಾರಣವಾಗಿರುವ ಯೂತ್ ಫಾರ್ ಸೇವಾ ಸಂಸ್ಥೆ ಒಳ್ಳೆಯ ಕಾರ್ಯ ಮಾಡಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಅಂಗಗಳು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಕರ್ನಾಟಕ ಸರ್ಕಾರದ ಮಾಜಿ ರಾಜ್ಯ ಆಯುಕ್ತರಾದ ಕೆ ವಿ ರಾಜಣ್ಣ ರವರು ಮಾತನಾಡಿ ಅಚ್ಚುಕಟ್ಟಾಗಿ ಚಿಗುರು 2026 ರೂಪಿಸಿರುವ ಸಂಸ್ಥೆಗೆ ಧನ್ಯವಾದಗಳು ಅರ್ಪಿಸಿದರು.

ಕರ್ನಾಟಕ ಸ್ವಯಂಸೇವಕ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ರಾಘವೇಂದ್ರರವರು ಸೇವಾ ಸಂಸ್ಥೆ ಬೆಳೆದು ಬಂದ ಹಾಗೂ ಕಾರ್ಯನಿರ್ವಹಿಸುತ್ತಿರುವ ಚಟುವಟಿಕೆಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಗುರುಪ್ರಸಾದ್ ಯೂತ್ ಫಾರ್ ಸೇವಾ ಸಂಸ್ಥೆಯ ವಿಷ್ಣು, ತೇಜನಾಯಕ್, ಡಾ. ಕಾರ್ತಿಕ್ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular