ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್ ವತಿಯಿಂದ ಮೇ ೨೩ ರಂದು ಶುಕ್ರವಾರಕೆ.ಆರ್.ನಗರ ವಿಧಾನಸಭಾಕ್ಷೇತ್ರದ ವ್ಯಾಪ್ತಿಗೆ ಸೇರಿದವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾಸ ಮಾರಂಭನಡೆಯಲಿದೆ.
ಬೆಳಿಗ್ಗೆ ೧೧ ಗಂಟೆಗೆ ಪಟ್ಟಣದ ಪುರಸಭೆ ಬಯಲುರಂಗಮAದಿರದಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿವಿವಿಧ ಇಲಾಖೆಗಳ ಅಂದಾಜು ೫೧೪ ಕೋಟಿ ರೂಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಶಾಸಕ ಡಿ.ರವಿಶಂಕರ್ಅವರಅಧ್ಯಕ್ಷತೆಯಲ್ಲಿ ನಡೆಯುವವೇದಿಕೆ ಕಾರ್ಯಕ್ರಮದಲ್ಲಿಕೇಂದ್ರ ಬೃಹತ್ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತು ಕೆ ವೆಂಕಟೇಶ್ ಉಪಸ್ಥಿತರಿರುವರು.
ಇವರೊಂದಿಗೆಇAಧನ ಸಚಿವಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ಗುಂಡೂರಾವ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಂದಾಯ ಸಚಿವಕೃಷ್ಣ ಭೈರೇಗೌಡ, ಕೃಷಿ ಸಚಿವಎನ್.ಚಲುವರಾಯಸ್ವಾಮಿ, ಪೌರಾಡಳಿತ ಸಚಿವರಹೀಮ್ಖಾನ್, ಸಹಕಾರ ಸಚಿವ ಕೆ. ಎನ್. ರಾಜಣ್ಣ, ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್, ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನೀರಾವರಿ ಸಚಿವಎನ್.ಎಸ್.ಬೋಸರಾಜು ಹಾಜರಿರುವರು.
ಜಿಲ್ಲೆಯಎಲ್ಲಾ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಮತ್ತು ಮೈಸೂರುಕೊಡಗು ಹಾಗೂ ಚಾಮರಾಜನಗರ ಲೋಕಸಭಾಕ್ಷೇತ್ರದ ಸಂಸದರು ಸೇರಿದಂತೆಇತರಚುನಾಯಿತಜನಪ್ರತಿನಿಧಿಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆಅಧಿಕಾರಿಗಳು ಭಾಗವಹಿಸುವರು. ಭಾರಿ ಸಿದ್ಧತೆ- ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರಇದೇ ಪ್ರಥಮ ಬಾರಿಗೆಕೆ.ಆರ್.ನಗರ ವಿಧಾನಸಭಾಕ್ಷೇತ್ರದ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಉದ್ಘಾಟನೆ ನೆರವೇರಿಸಲುಆಗಮಿಸುತ್ತಿರುವ ಹಿನ್ನಲೆಯಲ್ಲಿಕಳೆದ ಒಂದು ವಾರದಿಂದ ಬಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಲ್ಲಿನ ಪುರಸಭೆ ಬಯಲುರಂಗಮAದಿರದಆವರಣದಲ್ಲಿ ಸುಮಾರು ೧೦ ಸಾವಿರಕ್ಕೂಅಧಿಕ ಮಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು ಬೃಹತ್ವೇದಿಕೆ ನಿರ್ಮಾಣ ಮಾಡುವುದರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಲಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಜತೆಗೆ ವಿವಿದ ಇಲಾಖಾ ಸಚಿವರು ಮತ್ತುಕ್ಷೇತ್ರದಶಾಸಕರು ಸೇರಿದಂತೆಇನ್ನಿತರಆಹ್ವಾನಿತರಿಗೆ ಸ್ವಾಗತಕೋರುವ ಬೃಹತ್ಗಾತ್ರದ ಬ್ಯಾನರ್ ಮತ್ತು ಕಟೌಟ್‌ಗಳು ಹಾಗೂ ಪಕ್ಷದ ಬಾವುಟಗಳು ಪಟ್ಟಣದತುಂಬೆಲ್ಲಾರಾಜಾಜಿಸುತ್ತಿವೆ. ಶಾಸಕ ಡಿ.ರವಿಶಂಕರ್ ಕಳೆದ ಒಂದು ವಾರದಿಂದ ಸತತವಾಗಿ ಅಧಿಕಾರಿಗಳ ಸಭೆ ನಡೆಸುವುದರಜೊತೆಗೆ ನಾಲ್ಕು ದಿನಗಳ ಹಿಂದೆ ಸಾಲಿಗ್ರಾಮ ಮತ್ತುಕೆ.ಆರ್.ನಗರ ಬ್ಲಾಕ್ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆ ನಡೆಸಿ ಕಾರ್ಯಕ್ರಮದ ಯಶಸ್ವಿಗೆ ಕಾರ್ಯಯೋಜನೆ ರೂಪಿಸಿದ್ದಾರೆ.
ಇವರಿಗೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯದೊಡ್ಡಸ್ವಾಮೇಗೌಡ ಸೇರಿದಂತೆ ಪಕ್ಷದಚುನಾಯಿತಜನ ಪ್ರತಿನಿಧಿಗಳು, ಮುಖಂಡರು ಮತ್ತುಕಾರ್ಯಕರ್ತರು ಸಹಕಾರ ನೀಡುತ್ತಿದ್ದು ಕೆ.ಆರ್.ನಗರಕ್ಷೇತ್ರಕ್ಕೆಆಗಮಿಸುತ್ತಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತುಎಲ್ಲಾ ಸಚಿವರಿಗೆ ಭವ್ಯ ಸ್ವಾಗತ ನೀಡಲು ಸಿದ್ದರಾಗಿದ್ದಾರೆ.
ಪೊಲೀಸ್ ಭದ್ರತೆ- ಮುಖ್ಯಮಂತ್ರಿಉಪಮುಖ್ಯಮAತ್ರಿ ಸೇರಿದಂತೆರಾಜ್ಯ ಸಚಿವ ಸಂಪುಟದ ಬಹುತೇಕ ಸಚಿವರು ಮತ್ತು ಮೈಸೂರುಚಾಮರಾಜನಗರಜಿಲ್ಲೆಯ ಸಂಸದರು, ಶಾಸಕರುಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾ ಪೊಲೀಸ್ ವತಿಯಿಂದ ಕೆ.ಆರ್.ನಗರ ಪೋಲಿಸರ ಸಹಕಾರದೊಂದಿಗೆ ಭದ್ರತಾಕಾರ್ಯ ಕೈಗೊಳ್ಳಲಾಗಿದ್ದು ಕಳೆದ ಮೂರು ದಿನಗಳಿಂದ ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳು ಉಸ್ತುವಾರಿ ವಹಿಸಿತಾಲೀಮು ನಡೆಸುತ್ತಿದ್ದಾರೆ.
ಕೆ.ಆರ್.ನಗರ ಪಟ್ಟಣ ನವ ವಧುವಿನಂತೆ ಸಿಂಗಾರಗೊAಡಿದ್ದು ವಿವಿಧಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಕ್ಷಣಗಣನೆಆರಂಭವಾಗಿದ್ದುಕಾAಗ್ರೆಸ್ ಪಕ್ಷದ ಮುಖಂಡರು ಮತ್ತುಕಾರ್ಯಕರ್ತರಲ್ಲಿಇದು ಸಂಚಲನ ಮೂಡಿಸಿದೆ