Tuesday, November 4, 2025
Google search engine

Homeರಾಜ್ಯಸುದ್ದಿಜಾಲಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಭಕ್ತಿಭಾವದಿಂದ ಪಾದಪೂಜೆ

ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಭಕ್ತಿಭಾವದಿಂದ ಪಾದಪೂಜೆ

ಹುಣಸೂರು: ಆದಿಚುಂಚನಗಿರಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಪಾದ ಪೂಜೆ ನೆರವೇರಿಸಲಾಯಿತು. ನಗರದ ಬೋರ್ವೆಲ್ ಲಾರಿ ಮಾಲಿಕ ಜವನಿಕುಪ್ಪೆ ಶ್ರೀನಿವಾಸ್ ಮನೆಯಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕುಟುಂಬ ಸಮೇತ ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಿ ಆರ್ಶೀವಾದ ಪಡೆದುಕೊಂಡರು.

ನಂತರ ಆರ್ಶೀವಚನ ನೀಡಿದ ಶ್ರೀಗಳು ಮನುಷ್ಯನ ಜೀವನ ಪಾವನವಾಗ ಬೇಕಾದರೆ ಬದುಕಿನ ಕಾಲಘಟ್ಟದಲ್ಲಿ ಅಕ್ಷರ ಕಲಿಕೆಗೆ ಆದ್ಯತೆ ನೀಡಿ. ಶಿಸ್ತು ಬದ್ಧ ಜೀವನಕ್ಕೆ ಒತ್ತು ಕೊಟ್ಟು ಜನುಮ ನೀಡಿದ ತಂದೆ-ತಾಯಿಗೆ, ಗುರು ಹಿರಿಯರಿಗೆ ಗೌರವ ಕೊಟ್ಟಾಗ ಮಾತ್ರ ಭವಿಷ್ಯದ ಪ್ರಜೆಗಳಾಗಲು ಸಾಧ್ಯವೆಂದರು.

ಈಗಷ್ಟೇ ಬೆಳಕಿನ ಹಬ್ಬ ಮುಗಿದಿದೆ. ಅದೇ ರೀತಿ ರೈತನ ಬದುಕಿನಲ್ಲೂ ಬೆಳಕು ಮೂಡಬೇಕು‌ ರೈತ ಈ ದೇಶದ ಬೆನ್ನೆಲುಬು. ರೈತ ಹಸನಾಗಿದ್ದರೆ ನಾಡು, ದೇಶ ಸಮೃದ್ಧಿ ಸಾಧ್ಯವಿದ್ದು, ಸಮಾಜದಲ್ಲಿ ನಾವೆಲ್ಲರೂ ರೈತನ ನಗುವಿಗೆ, ಗೆಲುವಿಗೆ ಕಾರಣರಾಗಬೇಕು.ಅವನು ಹುತ್ತು ಬಿತ್ತದಿದ್ದರೆ. ಇಡೀ ವಿಶ್ವ ಹಸಿವಿನಿಂದ ನರಳಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್, ಪಿರಿಯಾಪಟ್ಟಣ ಶ್ರೀ ಮಠದ ಶಾಲೆಯ ವ್ಯವಸ್ಥಾಪಕ ಸುಧಾಕರ್, ವಕೀಲರಾದ ಲಕ್ಷ್ಮೀಕಾಂತ್, ಸಿ. ರಮೇಶ್, ಚಲನ ಚಿತ್ರನಟ ಕುಮಾರ್ ಅರಸೇಗೌಡ, ಜಯಣ್ಣ, ಸಿಂಚನ ಕೃಷ್ಣೇಗೌಡ, ಹಿರಿಕ್ಯಾತನಹಳ್ಳಿ ಪುಟ್ಟಣ್ಣ, ಶಿಕ್ಷಕರಾದ ಶಶಿಕುಮಾರ್, ಪುಟ್ಟೇಗೌಡ ಇದ್ದರು.

RELATED ARTICLES
- Advertisment -
Google search engine

Most Popular