Monday, December 15, 2025
Google search engine

Homeರಾಜ್ಯಸುದ್ದಿಜಾಲನಟ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ವಿವರಣೆ ಪಡೆದ ಡಿಜಿಪಿ ಅಲೋಕ್...

ನಟ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ವಿವರಣೆ ಪಡೆದ ಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು : ಕೈದಿಗಳಿಗೆ ರಾಜಾತಿಥ್ಯದಿಂದ ಸುದ್ದಿಯಲ್ಲಿರೋ ಪರಪ್ಪನ ಅಗ್ರಹಾರ ಜೈಲಿಗೆ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್​​ ಕುಮಾರ್​​ ಭೇಟಿ ನೀಡಿದ್ದು, ಜೈಲಿನ ಹೊರಾಂಗಣ ಸೇರಿ ಪ್ರತಿ ಬ್ಯಾರಕ್​​, ಅಡುಗೆ ಮನೆ, ಆಸ್ಪತ್ರೆ, ಬೇಕರಿಗಳಿಗೂ ತೆರಳಿ ಎಲ್ಲಾ ಪರಿಶೀಲನೆ ಮಾಡಿದರು. ಇದೇ ವೇಳೆ ಡಿಜಿಪಿ ಅಲೋಕ್ ಕುಮಾರ್ ಅವರು ಕೊಲೆ ಆರೋಪಿ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ವಿಚಾರಣೆ ಬಗ್ಗೆ ವಿಚಾರಣೆ ಪಡೆದುಕೊಂಡಿದ್ದಾರೆ.

ದರ್ಶನ್​ ಬಳಿ ಪ್ರಕರಣದ ಬಗ್ಗೆ ವಿವರಣೆ ಪಡೆದ  ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಲೋಕ್ ಕುಮಾರ್, ಜೈಲು ಪರಿಶೀಲನೆ ವೇಳೆ ದರ್ಶನ್ ಭೇಟಿ ಮಾಡಿ ಪ್ರಕರಣದ ವಿಚಾರಣೆ ಬಗ್ಗೆ ವಿವರಣೆ ಪಡೆದಿದ್ದೇನೆ. ಯಾವುದೇ ಕುಂದುಕೊರತೆ ಬಗ್ಗೆ ಹೇಳಿಲ್ಲ. ದರ್ಶನ್​​ ಸೇರಿ ಆರು ಮಂದಿ ಒಂದೇ ಬ್ಯಾರಕ್ ನಲ್ಲಿ ಆರಾಮ್ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular