Tuesday, August 5, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಪುರುಷನ ಅಸ್ತಿಪಂಜರ ಪತ್ತೆ!

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಪುರುಷನ ಅಸ್ತಿಪಂಜರ ಪತ್ತೆ!

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಅಸ್ತಿಪಂಜರ ಶೋಧ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಅಸ್ತಿಪಂಜರದ ಶೋಧ ಕಾರ್ಯದ ವೇಳೆ ಅಚ್ಚರಿಯೋಂದು ನಡೆದಿದೆ. ಆ ಸಾಕ್ಷವನ್ನು ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಧರ್ಮಸ್ಥಳದಲ್ಲಿ ಅಸ್ತಿಪಂಜರ ಶೋಧ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

11 ಪಾಯಿಂಟ್ ಸ್ಥಳ ಬಿಟ್ಟು ಬೇರೆ ಜಾಗದಿಂದ ದೂರುದಾರ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಬೇಡ ಎಂದು ಬೇರೊಂದು ಪಾಯಿಂಟ್ ತೋರಿಸಿದ್ದಾನೆ ಅಲ್ಲಿಂದ 120 ಮೀಟರ್ ಮುಂದೆ ದೂರುದಾರ ಹೆಜ್ಜೆ ಹಾಕಿದ್ದಾನೆ. ನಿನ್ನೆ 11ನೇ ಪಾಯಿಂಟ್ ಆಗೆದಿರುವುದಾಗ ಅಚ್ಚರಿ ಕಾದಿತ್ತು. ಧರ್ಮಸ್ಥಳದಲ್ಲಿ ಮತ್ತೊಂದು ಹೊಸ ಸ್ಥಳ ತೋರಿಸಿದ ವ್ಯಕ್ತಿ ಹೊಸ ಪಾಯಿಂಟ್ ಅಲ್ಲಿ ಪುರುಷನ ಪೂರ್ಣ ಅಸ್ತಿ ಪಂಜರ ಪತ್ತೆಯಾಗಿದೆ ಇದುವರೆಗೂ ಹದಿಮೂರು ಸ್ಥಳಗಳನ್ನು ಅನಾಮಿಕ ವ್ಯಕ್ತಿ ಗುರುತಿಸಿದ್ದಾನೆ. ದೂರುದಾರನ ನಡೆ ನಡೆ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಹೊಸ ಸ್ಥಳದ ಬಗ್ಗೆ ಎಸ್ಐಟಿಗೆ ದೂರುದಾರ ಮೊದಲೇ ತಿಳಿಸಿಲ್ಲ. ಏಕಾಏಕಿ ಹೊಸ ಸ್ಥಳದತ್ತ ಹೆಜ್ಜೆ ಹಾಕಿದ್ದಾನೆ ಎಸಿ ಮತ್ತು ಹೊಸ ಜಾಗದಲ್ಲಿ ಶೋಧ ನಡೆಯಿತು. ನೂತನ ಮಾಹಿತಿಯನ್ನು SIT ಗೆ ಗಮನಕ್ಕೆ ತರದೆ ಸ್ಥಳ ಗುರುತಿಸಿದ್ದಾನೆ. ಈ ಕುರಿತು ಎಸಿ ಸಹ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಎಸಿ ನಡೆ ಬಹಳ ಅನುಮಾನಗಳಿಗೆ ಎದೆ ಮಾಡಿಕೊಟ್ಟಿದೆ. ಹೊಸ ಜಾಗದಲ್ಲಿ ಪರಿಶೀಲನೆ ವೇಳೆ ಮನುಷ್ಯನ ಪೂರ್ಣ ಅಸ್ತಿ ಪಂಜರ ಪತ್ತೆಯಾಗಿದೆ. ಮರದ ಬುಡದಲ್ಲಿ ಪುರುಷನ ಪೂರ್ಣ ಅಸ್ತಿಪಂಜರ ಪತ್ತೆಯಾಗಿದೆ ಅದು ಕೂಡ ಎಂಟರಿಂದ ಒಂಬತ್ತು ತಿಂಗಳ ಅಸ್ತಿಪಂಜರ ಅನ್ನೋ ಮಾಹಿತಿ ಪತ್ತೆಯಾಗಿದೆ ಹೊಸ ಜಾಗದಲ್ಲಿ ಪರಿಶೀಲನೆ ವೇಳೆ ಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ.

RELATED ARTICLES
- Advertisment -
Google search engine

Most Popular