ಮಂಗಳೂರು (ದಕ್ಷಿಣ ಕನ್ನಡ ) ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ಅಧಿಕಾರಿಗಳು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತನಿಖೆ ನಡೆಸುವಾಗ ಅಕ್ರಮವಾಗಿ ಸಂಗ್ರಹಿಸಿದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಹೇಗಿರ್ತು ವಿಚಾರಣೆಗೆ ಹಾಜರಾಗಿ ಎಂದು ಅಧಿಕಾರಿಗಳು ತಿಮರೋಡಿಗೆ ನೋಟಿಸ್ ನೀಡಿದ್ದರು. ಆದರೆ ಇದುವರೆಗೂ ತಿಮ್ಮರವಾಡಿ ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ, ಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನ ಬೀದಿಯಲ್ಲಿ ಮಹೇಶ್ ಶೆಟ್ಟಿ ತಿಮರೊಡಿ ಇದೀಗ ತಲೆ ನಡೆಸಿಕೊಂಡಿದ್ದಾರೆ. ಮಹೇಶ್ ಶೆಟ್ಟಿ ತಿಮರೊಡಿ ಪರ ವಕೀಲರು ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೋರ್ಟನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಡಿಪಾರು ಆದೇಶದ ಪ್ರತಿ ನೀಡುವುದಕ್ಕೂ ತಿಮರೋಡಿ ಸಿಗುತ್ತಿಲ್ಲ ಎಂದು ವಕೀಲರು ತಿಳಿಸಿದರು. ಬೆಳ್ತಂಗಡಿ ಪೊಲೀಸರು ಹುಡುಕಾಟ ನಡೆಸುತಿದ್ದಾರೆ.ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಿಮರೊಡಿ ತಲೆಮರಿಸಿಕೊಂಡಿದ್ದಾರೆ.