Saturday, August 23, 2025
Google search engine

Homeಅಪರಾಧಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿಗೆ ಶರಣಾದ ಆರೋಪಿಯಿಂದ ಗಿರೀಶ್ ಮಟ್ಟಣ್ಣ ವಿರುದ್ಧ ಸ್ಫೋಟಕ ಮಾಹಿತಿ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿಗೆ ಶರಣಾದ ಆರೋಪಿಯಿಂದ ಗಿರೀಶ್ ಮಟ್ಟಣ್ಣ ವಿರುದ್ಧ ಸ್ಫೋಟಕ ಮಾಹಿತಿ

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿದ್ದೆ ಎಂದು ಶರಣಾಗಿ ರಾಜ್ಯ ಪೊಲೀಸರನ್ನು ದಿಕ್ಕು ತಪ್ಪಿಸಿದ್ದ ದೂರುದಾರನ್ನು ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಈಗಾಗಲೇ ಅನಾಮಿಕನನ್ನು ಬಂಧನಕ್ಕೊಳಪಡಿದ್ದು, ವಿಚಾರಣೆಯ ವೇಳೆ ಗಿರೀಶ್ ಮಟ್ಟಣ್ಣ ವಿರುದ್ಧ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ವಿಚಾರಣೆಯ ವೇಳೆ ಬಾಯ್ಬಿಟ್ಟ ಅನಾಮಿಕ ಸಿ ಎನ್ ಚಿನ್ನಯ್ಯ,ಗಿರೀಶ್ ಮಟ್ಟಣ್ಣನವರ ಹಾಗೂ ಮಹೇಶ್ ತಿಮರೋಡಿ ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಹೇಳುವಂತೆ 2 ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಮಹೇಶ್ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ ತಂಡದಿಂದ ಎರಡು ಲಕ್ಷ ಹಣ ಪಡೆದಿದ್ದೇನೆ ಎಂದು ಚೆನ್ನಯ್ಯ ಅಸಲಿ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.  ನಾನು ಪಾತ್ರಧಾರಿ ಮಾತ್ರ, ನನ್ನ ಹಿಂದೆ ಸೂತ್ರಧಾರಿಗಳು ಬೇರೆಯೇ ಇದ್ದಾರೆ. ನನ್ನನ್ನು ಕರೆತಂದು ಈ ರೀತಿ ಹೇಳುವಂತೆ ಹೇಳಿದ್ದಾರೆ, ಅದಕ್ಕಾಗಿ ಹೇಳಿದೆ ಎಂದು ಹೇಳಿದ್ದಾನೆ.

ನನ್ನನ್ನು ಒಂದಿಷ್ಟು ಜನ ಹುಡುಕಿಕೊಂಡು ಬಂದು ಬುರುಡೆ ನೀಡಿ ಇದನ್ನು ಕೋರ್ಟ್ ಗೆ ಒಪ್ಪಿಸಿ ಈ ರೀತಿ ಹೇಳು ಎಂದು ಒತ್ತಾಯಿಸಿದರು.. ಅದರಂತೆ ನಾನು ಒಪ್ಪಿಸಿದೆ ಎಂದು ಮಾಸ್ಕ್ ಮ್ಯನ್ ಸಿ ಎನ್ ಚೆನ್ನಯ್ಯ ಬಾಯ್ಬಿಟ್ಟಿದ್ದಾನೆ.

ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಒಂದಿಷ್ಟು ಜನ ಸಂಪರ್ಕಿಸಿ ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ. ನಿನಗೆ ಏನು ಆಗುವುದಿಲ್ಲ ಎಂದು ಹೇಳಿದ್ದರು.

ಆದರೆ ಇದು ಸರಿಯಲ್ಲ ಅನ್ನಿಸಿತು ಆದರೂ ಕೂಡ ಬಿಡದ ಅವರು, ನೀನು ಮೊದಲು ದೂರು ನೀಡು ಬಳಿಕ ತನಿಖೆ ಆರಂಭವಾಗುತ್ತದೆ. ಅದಾದ ಮೇಲೆ ಅನೇಕ ಜನ ದೂರುದಾರರು ಬರುತ್ತಾರೆ. ಬಳಿಕ ಅಲ್ಲಿಂದ ತನಿಖೆ ವೇಗವಾಗುತ್ತದೆ. ಭಯ ಪಡುವ ಅಗತ್ಯವಿಲ್ಲ ನಾವಿದ್ದೇವೆ ಎಂದು ಹೇಳಿದ್ದರು ಎಂದು ಚಿನ್ನಯ್ಯ ಹೇಳಿದ್ದಾನೆ.

ಬಳಿಕ ಅವರ ಸೂಚನೆಯಂತೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದೆ ಅಲ್ಲಿ ಒಂದಿಷ್ಟು ತರಬೇತಿ ನೀಡಿದರು. ಬಳಿಕ ಪೊಲೀಸರು ಯಾವೆಲ್ಲ ರೀತಿ ಪ್ರಶ್ನೆ ಮಾಡುತ್ತಾರೆ ಎಂದು ಹೇಳಿದರು. ಜೊತೆಗೆ ಅದಕ್ಕೆ ಯಾವ ರೀತಿ ಉತ್ತರಿಸಬೇಕು ಎಂದು ಕೂಡ ಅವರೇ ಹೇಳಿಕೊಟ್ಟಿದ್ದು ಎಂದು ಚಿನ್ನಯ್ಯ ತಿಳಿಸಿದ್ದಾನೆ.

ಚಿನ್ನಯ್ಯ ಧರ್ಮಸ್ಥಳದಲ್ಲಿ 1995 ರಿಂದ 2014 ರ ವರೆಗೆ  ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ವೇಳೆ, ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ತಾನೇ ಹೂತಿಟ್ಟಿದ್ದೇನೆ ಎಂದು ದೂರು ಸಲ್ಲಿಸಿದ್ದ.

RELATED ARTICLES
- Advertisment -
Google search engine

Most Popular