ಮಂಗಳೂರು (ಕ್ಷಿಣ ಕನ್ನಡ) ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿರುವ ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಇಂದು ಶನಿವಾರ ಕರೆತಂದಿದ್ದು ಇಂದು ಆತ ನ್ಯಾಯಾಲಯದ ಮುಂದೆತನ್ನ ಹೇಳಿಕೆಯನ್ನು ದಾಖಲಿಸಲಿದ್ದಾನೆ.
ಬೆಳ್ತಂಗಡಿ ನ್ಯಾಯಾಲಯಕ್ಕೆ ಸೆ.27 ರಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಭದ್ರತೆಯಲ್ಲಿ ಕರೆದುಕೊಂಡು ಬಂದಿದ್ದು. 11.30 ಕ್ಕೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ BNSS 183 ಹೇಳಿಕೆ ನೀಡಲಿದ್ದಾನೆ. ಈತ ಈ ಹಿಂದೆ ಎರಡು ದಿನಗಳ ಕಾಲ ಹೇಳಿಕೆ ನೀಡಿದ್ದು ಈತನ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಇಂದು ಮುಂದುವರಿದ ಹೇಳಿಕೆ ದಾಂಖಲಿಸುವ ಕಾರ್ಯ ನಡೆಯಲಿದೆ ಇಂದು ಈತನ ಹೇಳೊಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.