ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳ ಪ್ರಕರಣದಲ್ಲಿ ಹೊಸ ಸ್ಫೋಟಕ ತಿರುವು ಕಂಡುಬಂದಿದೆ. ಎಸ್.ಐ.ಟಿ ತಂಡ ಸೌಜನ್ಯರ ಮಾವ ವಿಠಲ್ ಗೌಡನೊಂದಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ಥಳ ಮಹಜರು ನಡೆಸಿದೆ. ತನಿಖೆಯಲ್ಲಿ ವಿಠಲ್ ಗೌಡ ಅವರು ಬುರುಡೆಯನ್ನು ಕಾಡಿನಿಂದ ತಂದು ಚಿನ್ನಯ್ಯನಿಗೆ ಒಪ್ಪಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳದ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆ ತರುವಲ್ಲಿ ಅವರ ಪಾತ್ರ ಸ್ಪಷ್ಟವಾಗಿದೆ. ರಾತ್ರಿ ವೇಳೆ ನಡೆದ ಮಹಜರು ಪ್ರಕರಣಕ್ಕೆ ನೂತನ ದಿಕ್ಕು ನೀಡಿದ್ದು, ತನಿಖೆ ಗಂಭೀರ ಮಟ್ಟಕ್ಕೆ ತಲುಪಿದೆ.
