ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಎಸ್‌ಐಟಿ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅರಣ್ಯದ ಒಳಭಾಗದಲ್ಲಿ ಸಾಕ್ಷಿ ದೂರುದಾರ ತೋರಿದ ಸ್ಥಳದಲ್ಲಿ ಗಂಭೀರ ಶೋಧ ನಡೆದಿದ್ದು, ಅಧಿಕಾರಿಗಳು ಮೂರು ಬಕೆಟ್‌ಗಳಲ್ಲಿ ಕಳೇಬರದ ಅವಶೇಷಗಳನ್ನು ಪ್ಯಾಕ್ ಮಾಡಿ ಸೀಲ್ ಮಾಡಿದ್ದಾರೆ. ಜೊತೆಗೆ ಮತ್ತೊಂದು ಉದ್ದದ ಪ್ಯಾಕೆಟ್ ಕೂಡ ಸೀಲ್ ಮಾಡಿ ಹೊರತರಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಯಾವುದೇ ಒಂದು ಮೃತದೇಹದ ಭಾಗಗಳೋ ಅಥವಾ ಒಂದಕ್ಕಿಂತ ಹೆಚ್ಚು ಮೃತದೇಹಗಳ ಅವಶೇಷಗಳೋ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇಂದು ಶೋಧಿತ 11ನೇ ಸ್ಥಳ ಬಿಟ್ಟು ಹೊಸ ಭಾಗದಲ್ಲಿ ಶೋಧ ನಡೆಯಿತು. ಇದೀಗ ತನಿಖೆ ಇನ್ನಷ್ಟು ಚುರುಕುಗೊಳ್ಳುವ ನಿರೀಕ್ಷೆ ಮೂಡಿದೆ.