ಬೆಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣದಲ್ಲಿ ನಿಖರ ತನಿಖೆಗೆ ಎಸ್‌ಐಟಿ ರಚಿಸಿ ಮತ್ತು ತನಿಖೆ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಟ ಪ್ರಕಾಶ್ ರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸುತ್ತಿರುವಾಗ, ವರದಿ ಬಂದ ನಂತರ ಅಗತ್ಯವಿದ್ದರೆ ಎಸ್‌ಐಟಿ ರಚನೆಗೆ ಸಿದ್ಧವೆಂದು ಸಿಎಂ ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ನಿಮ್ಮ ಮಾತಿನ ಮೇಲೆ ನಂಬಿಕೆ ಇದೆ ಸಿಎಂ ಸಿದ್ದರಾಮಯ್ಯರೇ, ಆದರೆ ಹಂತಕರನ್ನು ರಕ್ಷಿಸುವವರನ್ನು ನಂಬಲಾರೆ. ತಕ್ಷಣ ಕ್ರಮ ತೆಗೆದುಕೊಳ್ಳಿ, ಸಾಕ್ಷ್ಯಾಧಾರ ನಾಶವಾಗದಂತೆ ನೋಡಿಕೊಳ್ಳಿ” ಎಂದು ಆಗ್ರಹಿಸಿದ್ದಾರೆ.