Tuesday, July 29, 2025
Google search engine

Homeರಾಜಕೀಯಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ | ದೂರುದಾರ ಅನಾಮಧೇಯ ವ್ಯಕ್ತಿ ಹಿಂದೆ ಕೇರಳ ಸರಕಾರ ಇದೆ...

ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ | ದೂರುದಾರ ಅನಾಮಧೇಯ ವ್ಯಕ್ತಿ ಹಿಂದೆ ಕೇರಳ ಸರಕಾರ ಇದೆ : ಆರ್.ಅಶೋಕ್

ಮೈಸೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣದ ಹಿಂದೆ ಕೇರಳ ಸರ್ಕಾರದ ಕೈವಾಡವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈ ಪ್ರಕರಣವು ಜಟಿಲವಾಗಿಲ್ಲ. ಜಟಿಲವಾಗಿಸಲಾಗುತ್ತಿದೆ. ಆರೋಪ ಮಾಡಿದವರು ಅನಾಮಧೇಯ ವ್ಯಕ್ತಿಯಾಗಿದ್ದು, ಈತನ ಹಿಂದೆ ಕೇರಳ ಸರ್ಕಾರವಿದೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿರುವುದನ್ನು ಸ್ವಾಗತಿಸಿದರು. ಧರ್ಮಸ್ಥಳದ ಆಡಳಿತ ಮಂಡಳಿಯು ಕೂಡ ತನಿಖೆಯನ್ನು ಬೆಂಬಲಿಸುತ್ತಿದೆ ಎಂದರು.

“ನಾಳೆ ಈ ಪ್ರಗತಿಪರ ಗುಂಪು ಎಸ್‌ಐಟಿಯನ್ನು ನಂಬದೆ ಮತ್ತೊಂದು ವಾದ ಮುಂದಿಟ್ಟುಕೊಳ್ಳಬಹುದು. ತನಿಖೆ ಸಮರ್ಪಕವಾಗಿಲ್ಲ ಎಂದು ಚೊಚ್ಚಲ ಹೇಳಿಕೆ ನೀಡಬಹುದು” ಎಂಬ ಆಶಂಕೆ ವ್ಯಕ್ತಪಡಿಸಿದರು. ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ ಬುರುಡೆ ಬಿಡ್ತಾನೋ ಕಾದು ನೋಡೋಣ. ಈ ಧರ್ಮಸ್ಥಳದ ಸುದ್ದಿ ಕೇರಳದಲ್ಲಿ ಚರ್ಚೆ ಆಗುತ್ತಿದೆ. “ಈ ಪ್ರಕರಣದ ಹಿಂದೆ ಇರುವ ಸುಳಿವುಗಳು ತನಿಖೆಯಲ್ಲಿ ಹೊರಬರುತ್ತವೆ. ಬಳಿಕ ನಾನು ಇನ್ನಷ್ಟು ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular