ದೆಹಲಿಯಲ್ಲಿ ಇಂದಿನಿಂದ ಆರಂಭಗೊಂಡ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಬಾಲಕಿಯರ 19 ವಯೋಮಾನದ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಿಯಾನಾ ಧೃತಿ ಫರ್ನಾಂಡಿಸ್ ಇವರು 50ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ 34.84 ಸೆಕೆಂಡ್ ಸಮಯದಲ್ಲಿ ಈಜಿ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದಾರೆ.
ಇವರು ಮಂಗಳೂರಿನ ಸಂತ ಅಲೋಷಿಯಸ್ ಪದವಿ ಕಾಲೇಜಿನ ಈಜುಕೊಳದಲ್ಲಿ ವೀ ವನ್ ಅಕ್ವಾ ಸೆಂಟರ್ ನಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿ ಎಸ್ ವಿಟ್ಲ ಹಾಗೂ ತರಬೇತುದಾರರಾದ ಗಗನ್ ಜಿ ಪ್ರಭು ಮತ್ತು ಸಂಜಯ್ ಉಳ್ಳವೇಕರ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ವೀ ವನ್ ಆಕ್ವಾ ಸೆಂಟರ್ ನ ನಿರ್ದೇಶಕ ನವೀನ್ ಮತ್ತು ರೂಪ ಪ್ರಭು ಇವರು ಅಭಿನಂದಿಸಿದ್ದಾರೆ.



