ಮಂಡ್ಯ: ಸ್ವಾಭಿಮಾನ, ಗೌರವದ ವಿಚಾರದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಮಾದರಿ. ಜನತಾ ಪಕ್ಷವನ್ನ ನಿನ್ನೆಯೇ ಅಂತಿಮಗೊಳಿಸಿದ್ದೀರಿ. ನಿನ್ನೆ ಕೇಸರಿ ಶಾಲು ಹಾಕೊಂಡು ಪಕ್ಷದ ಅಂತಿಮ ಯಾತ್ರೆಗೆ ತಿಲಾಂಜಲಿ ಹಾಡಿದ್ದೀರಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಎನ್ ಚೆಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಅವರು, ಇಷ್ಟು ದಿನ ಹಸಿರು ಶಾಲು ಹಾಕೊಂಡು ಹೋರಾಟ ಮಾಡುತ್ತಿದ್ರಿ. ನೀವು ಪಕ್ಷ ಸೇರ್ಪಡೆ ಆಗಿದ್ದರೆ ಜನತಾ ಪರಿವಾರದವರಿಗೆ ನೋವಾಗುತ್ತಿರಲಿಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ತಮ್ಮ ರಾಜಕೀಯಕ್ಕಾಗಿ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಹಾಡೀದ್ದೀರಿ ಎಂದು ಕಿಡಿಕಾರಿದರು.
ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗೆ ಇಳಿಸಬೇಕ? ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಸರ್ಕಾರ, ಜಿಲ್ಲಾಡಳಿತ ಕಾನೂನುಬದ್ಧವಾಗಿ ಏನು ಮಾಡಬೇಕೋ ಮಾಡಿದೆ. ನಿಮ್ಮ ಹೋರಾಟ ನೋಡಿದ್ರೆ ರಾಷ್ಟ್ರ ಧ್ವಜ ಇಳಿಸಬೇಕು ಅಂತಿದೆ. ಮೊನ್ನೆ ವಿರೋಧ ಪಕ್ಷದ ನಾಯಕರು ಬಂದು ಹೋಗಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ವಿಚಾರದಲ್ಲಿ ಹೋರಾಟ ಬೇಡ. ಉದ್ದಕ್ಕೂ ಜಿಲ್ಲೆಯ ಜನರನ್ನ, ಯುವಕರಿಗೆ ಪ್ರವೋಕ್ ಮಾಡಿದ್ದೀರ ಎಂದು ಹರಿಹಾಯ್ದಿದ್ದಾರೆ.
ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಒಮ್ಮೆ ನಿಮ್ಮನ್ನ ಸಂಪೂರ್ಣ ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಸೋಲಿಸಿ, ನಮ್ಮನ್ನ ಗೆಲ್ಲಿಸಿದ್ದಾರೆ. ಇಂತಹ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬದಲಿಸಲು ಆಗಲ್ಲ. ಈ ವಿಚಾರ ನಿಮಗೆ ಶೋಭೆ ತರಲ್ಲ ಎಂದು ಹೇಳಿದರು.
ನೀವೊಬ್ಬ ಮಾಜಿ ಪ್ರಧಾನಿ ಮಗ. ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿದ್ರು. ಚಲುವರಾಯಸ್ವಾಮಿ ಯಾರ ಹಣೆಬರಹ ಯಾರೂ ಬದಲಿಸಲು ಸಾಧ್ಯವಿಲ್ಲ. ನಿನ್ನ ಕೆಲಸ ನೀನು ಮಾಡು ಅಂತ ಸಲಹೆ ನೀಡಿದ್ರು ಎಂದರು.