Tuesday, September 9, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಗುತ್ತಿಗೆ ಆಧಾರದಲ್ಲಿ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ

ಗುತ್ತಿಗೆ ಆಧಾರದಲ್ಲಿ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ

ಹಾಸನ : PM-JANMAN ಮತ್ತುDA-JGUA ಯೋಜನೆಯಡಿ ಸಂಚಾರಿ ಆರೋಗ್ಯ ಘಟಕ ಸಕಲೇಶಪುರ ತಾಲ್ಲೂಕು ಇಲ್ಲಿ ಗುತ್ತಿಗೆ ಆಧಾರದ ಮೇಲೆ MBBS ವೈದ್ಯರು 1, ಶುಶ್ರೂಷಕರು 1 ಮತ್ತು ಪ್ರಯೋಗಶಾಲಾ ತಜ್ಞರ 1 ಹುದ್ದೆಯ ನೇಮಕಾತಿಯನ್ನು ಮಾರ್ಗಸೂಚಿ ಅನ್ವಯ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ನೇರ ಸಂದರ್ಶನವನ್ನು ಸೆ.15 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲಿ ನಡೆಸಲಾಗುವುದು.

ವಿದ್ಯಾರ್ಹತೆ: ವೈದ್ಯರು: MBBS with Convocation Certificate & KMC Registration ಅನುಭವ ಕನಿಷ್ಟ 2 ವರ್ಷ. ವಯೋಮಿತಿ 65 ವರ್ಷ, ಶುಶ್ರೂಷಕರು: GNM Nursing / B.Sc Nursing with KSNC Registration,ಅನುಭವ ಕನಿಷ್ಟ 2 ವರ್ಷ, ವಯೋಮಿತಿ 45 ವರ್ಷಗಳು, ಪ್ರಯೋಗಶಾಲಾ ತಂತ್ರಜ್ಞರು : SSLC with 3 Years DMLT OR PUC Science with 2 Year DMLT with Karnataka State Paramedical Board Registration, ಅನುಭವ ಕನಿಷ್ಟ 2 ವರ್ಷ, ವಯೋಮಿತಿ 45 ವರ್ಷಗಳು. ವೇತನ ವೈದ್ಯರಿಗೆ ಮಾಸಿಕ ರೂ.75,000, ಶುಶ್ರೂಷಕರಿಗೆ ಮತ್ತು ಪ್ರಯೋಗಶಾಲಾ ತಂತ್ರಜ್ಞರಿಗೆ ಮಾಸಿಕ ರೂ 17,435.

ಸೂಚನೆ : ಸೆ.15 ರಂದೇ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಿ, ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular