Sunday, March 8, 2026
Google search engine

Homeರಾಜಕೀಯಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಮತ್ತೆ ಭಿನ್ನಮತ ಸದ್ದು : ಬಿಜೆಪಿ ಹೋರಾಟದಿಂದ ದೂರ ಉಳಿದ ಜೆಡಿಎಸ್ ಶಾಸಕರು

ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಮತ್ತೆ ಭಿನ್ನಮತ ಸದ್ದು : ಬಿಜೆಪಿ ಹೋರಾಟದಿಂದ ದೂರ ಉಳಿದ ಜೆಡಿಎಸ್ ಶಾಸಕರು

ಬೆಂಗಳೂರು : ಮೈತ್ರಿ ಪಕ್ಷಗಳಾಗಿರು ಬಿಜೆಪಿ ಮತ್ತು ಜೆಡಿಎಸ್​​ ನಡುವೆ ಹಲವು ವಿಚಾರಗಳಲ್ಲಿ ಸಾಬೀತಾಗಿದ್ದ ಸಮನ್ವಯದ ಕೊರತೆ ಮತ್ತೆ ಸದ್ದು ಮಾಡಿದೆ. ನಿನ್ನೆ ಬಜೆಟ್ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟದ ವಿಚಾರದಲ್ಲೂ ಉಭಯ ಪಕ್ಷಗಳ ನಾಯಕರ ನಡುವೆ ಒಮ್ಮತ ಇರಲಿಲ್ಲ. ಬಿಜೆಪಿ ಪ್ರತ್ಯೇಕವಾಗಿ ಹೋರಾಟ ನಡೆಸಿರುವ ಬಗ್ಗೆ ಜೆಡಿಎಸ್ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್ ಖಂಡಿಸಿ ನಿನ್ನೆ ವಿಧಾನಸೌಧದಲ್ಲಿ ಚೊಂಬು ಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿದ್ದರೆ, ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಯಾವುದೇ ಮಾಹಿತಿ ನೀಡಲಿಲ್ಲ. ಎಲ್ಲವನ್ನೂ ಪ್ಲ್ಯಾನ್​​ ಮಾಡಿ ಕೊನೆ ಕ್ಷಣದಲ್ಲಿ ಹೋರಾಟಕ್ಕೆ ಬನ್ನಿ ಎಂದು ನಾಮಕವಸ್ಥೆಗೆ ಕರೆಯುತ್ತಾರೆ. ಹೀಗಾಗಿ ನಾವು ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಜೆಡಿಎಸ್ ನಾಯಕರಿಗೆ ದಳ ಶಾಸಕರು ದೂರು ನೀಡಿದ್ದಾರೆ. ಬಳಿಕ ಬಿಜೆಪಿ ಹೋರಾಟದಿಂದ ಅಂತರ ಕಾಯ್ದುಕೊಂಡ ಪ್ರಸಂಗ ನಡೆದಿದೆ.

ಮೈತ್ರಿ ನಾಯಕರ ಮುನಿಸಿನ ನಡುವೆ ಶಾಸಕ ಶರಣಗೌಡ ಕಂದಕೂರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೆಚ್​​.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ರೆ 140-150 ಸ್ಥಾನ ಬರುತ್ತೆ. ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿ. ನಮ್ಮದು ಒಂದು ಸೈಡ್ ಲವ್ ಆಗಿದೆ. ನಾವು BJPಯವರನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನ ಪ್ರೀತಿಸ್ತಿಲ್ಲ. ಸಮನ್ವಯತೆಯಿಂದ ಹೋಗಿದ್ದಕ್ಕೆ MP ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ ಎಂದು ಹೇಳಿದ್ದಾರೆ.

ಇನ್ನು ಅಧಿವೇಶನದ ವೇಳೆ ಸಮನ್ವಯ ಸಭೆ ಮಾಡಿಕೊಂಡು ಬರುತ್ತಿದ್ದೆವು. ಆದರೆ ನಿನ್ನೆ ಬಿಜೆಪಿ ಕಡೆಯಿಂದ ಸಮನ್ವಯ ಸಭೆ ಮಾಡುವ ಬಗ್ಗೆ ಏನೂ ಬಂದಿಲ್ಲ. ಅರ್ಧ ಗಂಟೆ ಮುಂಚಿತವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ರು. ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನಮ್ಮ ಮೇಲೆ ಪ್ರೀತಿ, ಒಲವು ಇದೆ. ಕೆಲ ಬಿಜೆಪಿ ನಾಯಕರಿಂದ ಅವರೇ ಚಿವುಟಿ, ತೊಟ್ಟಿಲು ತೂಗುವಂತ ಕೆಲಸ ಆಗುತ್ತಿದೆ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ರಾಜ್ಯದ ಜನ ಬಯಸುತ್ತಿದ್ದಾರೆ. ಅವರನ್ನು ನೋಡಿ ನಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಸಿಎಂ ಬಗ್ಗೆ ಮೋದಿ ತೀರ್ಮಾನ ಮಾಡ್ತಾರೆಂದು ದೇವೇಗೌಡರು ಹೇಳಿದ್ದಾರೆ. ಆದರೆ ನಾವು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತೇವೆ. ಸಿಎಂ ಅಭ್ಯರ್ಥಿ ಬಗ್ಗೆ ಸರ್ವೆ ಮಾಡಿಸಿ ಬಿಜೆಪಿಯವರು ತೀರ್ಮಾನಿಸಲಿ ಎಂದು ಶಾಸಕ ಶರಣಗೌಡ ಕಂದಕೂರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular