ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೊಬೈಲ್ ಬಳಕೆಯ ವ್ಯಾಮೋಹದಿಂದ ಕ್ರೀಡೆಗಳ ಬಗ್ಗೆ ಸಾಕಷ್ಟು ಕ್ರೀಡಾಪಟುಗಳು ನಿರಾಕ್ತಿ ವಹಿಸುತ್ತಿರುವ ಪರಿಣಾಮವಾಗಿ ಪ್ರತಿಭಾವಂತ ಕ್ರೀಡಾಪಟುಗಳು ಸಂಖ್ಯೆ ಕ್ಷೀಣಗೊಳ್ಳುತ್ತಿದೆ ಎಂದು ಕೆ.ಆರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ವಿಷಾದ ವ್ಯಕ್ತಪಡಿಸಿದರು.
ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದಲ್ಲಿ ನಡೆದ ಚುಂಚನಕಟ್ಟೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಶಾಲಾ-ಕಾಲೇಜುಗಳಲ್ಲಿ ಪಠ್ಯ ಶಿಕ್ಷಣದ ಜತೆಯಲ್ಲೆ ಕ್ರೀಡೆ, ಸಾಹಿತ್ಯ ಮತ್ತು ಕಲೆ-ಸಾಂಸ್ಕೃತಿಕ ಇನ್ನಿತರ ಪಠ್ಯೇತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದರು. ವಿದ್ಯಾರ್ಥಿಗಳ ದೈನಂದಿನ ಓದಿನಲ್ಲಿ ಕ್ರೀಡೆಯೂ ಸಹ ಒಂದು ಅಂಗವಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ತಿರುವು ಕೊಡುವ ಪ್ರಮುಖ ಕ್ಷೇತ್ರ ಕ್ರೀಡೆಯಾಗಿದೆ. ಕ್ರೀಡೆ ಪ್ರತಿಯೊಬ್ಬ ಫ ವಿದ್ಯಾರ್ಥಿಯ ಜೀವನ ಉತ್ತಮ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದ್ದು ಒಂದಲ್ಲ ಒಂದು ಕ್ರೀಡೆಯಲ್ಲಿ ಸ್ಪರ್ಧೆ ಮಾಡಿ ದೈಹಿಕ, ಮಾನಸಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.
ಕ್ರೀಡಾಕೂಟದ ಉಸ್ತುವಾರಿಯನ್ನು ಚಿಕ್ಕಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ವಹಿಸಿ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು ಶಾಲೆಯ ಮುಖ್ಯಶಿಕ್ಷಕ ಕರ್ತಾಳ್ ಕುಮಾರ್ ನೇತೃತ್ವ ವಹಿಸಿದ್ದರು.
ಕ್ರೀಡಾಕೂಟದಲ್ಲಿ 27 ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಚಿಕ್ಕಕೊಪ್ಪಲು ಶಾಲೆಯಿಂದ ಬಿಇಓ ಕೃಷ್ಣಪ್ಪ ಅವರನ್ನು ಸನ್ಮಾಸಿಲಾಯಿತು. ಅಲ್ಲದೆ ಕ್ರೀಡೆಯಲ್ಲಿ ವಿಜೇತರಾದವರಿಗೆ ಡಾ.ಜನರ್ದಾನ್ ಭಟ್ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಸುರೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸ್ವಾಮೀಗೌಡ, ದೈಹಿಕ ಪರಿವೀಕ್ಷಕ ಕುಮಾರಸ್ವಾಮಿ, ಇ .ಸಿ.ಓ ಪೂರ್ಣಿಮಾ, ಕುಸುಮಾ, ಬಿ.ಅರ್.ಪಿ.ಸುಬ್ಬರಾಮನ್, ಸಿ.ಅರ್.ಪಿ.ಗಳಾದ ಧರ್ಮರಾಜ್, ನಂದಿನಿ, ನರ್ತನಾ, ಶಿಕ್ಷಕರಾದ ಗಂಧನಹಳ್ಳಿ ಸ್ವಾಮಿ, ಪ್ರಭು,ಹಾಡ್ಯ ರವೀಂದ್ರ, ಲೋಕೇಶ್, ಶ್ರೀನಿವಾಸ್, ಸವಿತಾ, ದೀಪ,ಕೌಶಲ್ಯ, ಲಕ್ಷ್ಮಣೇಗೌಡ,ಪವಿತ್ರ, ಜಗದೀಶ್, ಸ್ವಾಮಿ ಮಂಜುಳಾ, ಶಶಿಧರ್, ದೈಹಿಕ ಶಿಕ್ಷಕರಾದ ಮಹೇಶ್ ಬಳಿಗಾರ್, ಬೈರನಾಯಕ , ಬಿ.ಅರ್. ಮಂಜುನಾಥ, ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ್, ಚಿಕ್ಕಕೊಪ್ಪಲು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಡಿ.ಎಸ್.ಭರತ್ ಕುಮಾರ್, ಸದಸ್ಯ ಮೂಸಿಲೋಕೇಶ್, ಚಿಕ್ಕಕೊಪ್ಪಲು ಗ್ರಾಮದ ಕುಮಾರಸ್ವಾಮಿ, ಮೀನ್ ರಾಮಸ್ವಾಮಿ, ಸಂಗೊಳ್ಳಿ ರಾಯಣ್ಣ ಯುವ ಬಳಗದ ಅಧ್ಯಕ್ಷ ಅರುಣ್ ಕಲ್ಲಹಟ್ಟಿ, ವಿನೋದ್, ದರ್ಶನ್, ಚಿರಂತ್, ಚರಣ್, ನಿತಿನ್,ಪವನ್,ರವಿ,ವಿಕಾಶ್, ಅಮಿತ್ ಗಾಂಧಿ, ಅರುಣ್, ಅಭಿರಾಜೇಶ್ , ಲವಕುಮಾರ್, ತಿಮ್ಮನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.