Thursday, July 17, 2025
Google search engine

Homeರಾಜ್ಯಸುದ್ದಿಜಾಲಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರು ಹಾಗೂ ತೃತೀಯಲಿಂಗಿಗಳಿಗೆ ಬಾಗಿನ ವಿತರಣೆ

ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರು ಹಾಗೂ ತೃತೀಯಲಿಂಗಿಗಳಿಗೆ ಬಾಗಿನ ವಿತರಣೆ

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವತಿಯಿಂದ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ತೃತೀಯಲಿಂಗಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ರವರು ಸೀರೆ, ಕುಂಕುಮ, ಅರಿಶಿಣ, ಬಲೆ ಮೂಲಕ ಬಾಗಿನ ವಿತರಿಸಿ ಶುಭ ಕೋರಿದರು.

ನಂತರ ಮಾತನಾಡಿದ ಅವರು ಸಮಸ್ತ ನಾಡಿನ ಜನತೆಗೆ ಚಾಮುಂಡೇಶ್ವರಿ ವರ್ಧಂತಿ ಶುಭಾಶಯ ಕೋರಿದರು,
ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಚಾಮುಂಡೇಶ್ವರಿ ತಾಯಿ ಹೆಚ್ಚು ಶಕ್ತಿ ನೀಡಲಿ, ಪೌರಕಾರ್ಮಿಕರಿಗೂ ಹಾಗೂ ತೃತೀಯ ಲಿಂಗಿಗಳಿಗೆ ಗುರುತಿಸಿ ಬಾಗಿನ ನೀಡುವ ಸೌಭಾಗ್ಯ ಕಲ್ಪಿಸಿಕೊಟ್ಟ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವಿಶೇಷ ಧನ್ಯವಾದ ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿವಿನ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಚಿಕ್ಕಮಂಗಳೂರು ಮುರಾಜಿ ಶಾಲೆಯ ಪ್ರಾಂಶುಪಾಲರಾದ ದೀಪ, ಅಶ್ವಿನಿ ಗೌಡ, ಸುಶೀಲ, ಸರಸ್ವತಿ ಹಲಸಗಿ, ರಾಣಿ ಪ್ರಭ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular