ಧಾರವಾಡ : 2024-25 ನೇ ಸಾಲಿನಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ಅವಧಿಯಲ್ಲಿ ಏಪ್ರೀಲ್ 12 ರಿಂದ ಮೇ 28 ರವರೆಗೆ ಬಿಸಿಊಟ ವಿತರಣೆ ಮಾಡಲಾಗುವುದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಧಾರವಾಡ ಗ್ರಾಮೀಣ 119, ಧಾರವಾಡ ಶಹರ 52, ಹುಬ್ಬಳ್ಳಿ ಗ್ರಾಮೀಣ 71, ಹುಬ್ಬಳ್ಳಿ ಶಹರ 46, ಕಲಘಟಗಿ 105, ಕುಂದಗೋಳ 78 ಹಾಗೂ ನವಲಗುಂದ ತಾಲೂಕಿನ 89 ಶಾಲೆಗಳು ಸೇರಿದಂತೆ ಒಟ್ಟು 560 ಶಾಲೆಗಳ 59,372 ವಿದ್ಯಾರ್ಥಿಗಳು ಬಿಸಿಊಟದ ಪ್ರಯೋಜನ ಪಡೆಯಲಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಿಸಿಊಟ ವಿತರಿಸಲಾಗುತ್ತದೆ. ಮೊದಲ ದಿನದಂದು ಸಿಹಿ ವಿತರಣೆ ಮಾಡಲಾಗುತ್ತದೆಂದು ಅವರು ತಿಳಿಸಿದ್ದಾರೆ.
ವಿಧ್ಯಾರ್ಥಿಗಳು ಹಾಗೂ ಪಾಲಕರು ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸಬಹುದಾಗಿದೆ. ಮೇಲ್ವಿಚಾರಣಾ ಅಧಿಕಾರಿಗಳಾದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ದೂರವಾಣಿ ಸಂಖ್ಯೆ 9448999339, ಉಸ್ತುವಾರಿ ಅಧಿಕಾರಿಗಳಾದ ಪಿ.ಎಂ.ಪೆÇೀಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ 9742809822, ಧಾರವಾಡ ಗ್ರಾಮೀಣ 9663520250, ಧಾರವಾಡ ಶಹರ 7019380363, ಹುಬ್ಬಳ್ಳಿ ಗ್ರಾಮೀಣ 9916055869, ಹುಬ್ಬಳ್ಳಿ ಶಹರ 9482826361, ಕಲಘಟಗಿ 9880177599, ಕುಂದಗೋಳ 9480695188 ಹಾಗೂ ನವಲಗುಂದ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ 9480695189 ಸಂಪರ್ಕಿಸಬಹುದು. ಧಾರವಾಡ ಜಿಲ್ಲೆಯಲ್ಲಿರುವ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಸಹ ಬಿಸಿಊಟ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಸಿ.ಇ.ಓ. ಸ್ವರೂಪ ಟಿ.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.