ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಚೌತಿ ಗ್ರಾಮ ಪಂಚಾಯಿತಿಯ ವತಿಯಿಂದ ಗೌರಮ್ಮನವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟಿ ಸಿಬ್ಬಂದಿಗಳಿಗೆ ಜರ್ಕಿನ್ ವಿತರಣೆ ಮಾಡಲಾಯಿತು.
ಜರ್ಕಿನ್ ವಿತರಿಸಿ ಮಾತನಾಡಿದ ಅವರು ಮಳೆಗಾಲದ ಸಂದರ್ಭದಲ್ಲಿ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ತುರ್ತು ಕಾರ್ಯನಿರ್ವಹಿಸಲು ಅನುಕೂಲ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳಿಗೆ ಜರ್ಕಿನ್ ವಿತರಿಸುತ್ತಿದ್ದು , ಪಂಚಾಯಿತಿಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕಾದರೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಸಹಕಾರ ತುಂಬಾ ಪ್ರಮುಖವಾಗಿದ್ದು ಅವರ ಸೇವೆಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿಯ ಆಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಾರ್ಯದರ್ಶಿ ಚೆನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಘು, ರಾಮೇಗೌಡ, ಲಕ್ಷ್ಮಣ್ ಪಾಟೇಲ್, ಸ್ವಾಮಿ.ಬಿ, ಸ್ವಾಮಿ, ರವಿಚಂದ್ರ ಬೂದಿತಿಟ್ಟು, ಶೃತಿ ಸಿ. ಕೆ, ಯಮುನಾ, ಶಾರದ, ಗೌರಿ ಸಿಬ್ಬಂದಿಗಳಾದ ನಂದೀಶ್, ಪ್ರಶಾಂತ್, ವಸಂತ, ಸತೀಶ, ನಟೇಶ, ಮುಖಂಡರಾದ ಮುತ್ತುರಾಜ್, ಗಣೇಶ್ ಸಿರಿದಂತೆ ಹಲವರು ಭಾಗವಹಿಸಿದ್ದರು.