ತಾಂಡವಪುರ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಉಚಿತವಾಗಿ ಹಾಲಿನ ಕ್ಯಾನುಗಳನ್ನು ಸಂಘದ ಅಧ್ಯಕ್ಷ ಎನ್ ಚಂದ್ರು ವಿತರಿಸಿದರು.
ಇದೇ ವೇಳೆ ಮಾತನಾಡಿದ ಚಂದ್ರು ರವರು, ನಮ್ಮ ಸಂಘದ ವಾರ್ಷಿಕ ಮಹಾಸಭೆಯ ಪ್ರಯುಕ್ತವಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಸಂಘಕ್ಕೆ ಬಂದ ಲಾಭದಿಂದ ಎಲ್ಲಾ ಹಾಲು ಉತ್ಪಾದಕರಿಗೂ ಉಚಿತವಾಗಿ ಸ್ಟೀಲು ಕ್ಯಾನುಗಳನ್ನು ವಿತರಿಸಲಾಗಿದೆ ಎಂದರು.
ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಸಹ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೈನುಗಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ಎನ್ ಚಂದ್ರು ತಿಳಿಸಿದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜವನೇಗೌಡ, ಸದಸ್ಯರಾದ ಮಹದೇವಯ್ಯ, ಸಂಘದ ಕಾರ್ಯದರ್ಶಿ ರಾಧಾ ಹಾಗೂ ಸಂಘದ ಸದಸ್ಯರುಗಳು ಹಾಲು ಉತ್ಪಾದಕರು ಈ ಸಂದರ್ಭದಲ್ಲಿ ಹಾಜರಿದ್ದರು.