Wednesday, May 21, 2025
Google search engine

Homeರಾಜ್ಯಸುದ್ದಿಜಾಲಗರ್ಭ ಪೂರ್ವ , ಪ್ರಸವ ಪೂರ್ವ ತಂತ್ರ ವಿಧಾನಗಳ ಕಾಯ್ದೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ...

ಗರ್ಭ ಪೂರ್ವ , ಪ್ರಸವ ಪೂರ್ವ ತಂತ್ರ ವಿಧಾನಗಳ ಕಾಯ್ದೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ : ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ತಂತ್ರ ವಿಧಾನಗಳ ಕಾಯ್ದೆ (ಪಿಸಿಪಿಎನ್‌ಡಿಟಿ) (ಲಿಂಗ ಆಯ್ಕೆ ನಿಷೆಧ) ೧೯೯೪ ಅನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷೆನಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸ್ಕ್ಯಾನಿಂಗ್ ಕೇಂದ್ರಗಳ ಕಾರ್ಯವೈಖರಿ ಹಾಗೂ ಹೊಸದಾಗಿ, ನೋಂದಣಿಗಾಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಸ್ಕ್ಯಾನಿಂಗ್ ಕೇಂದ್ರಗಳು ಕಾಯ್ದೆಯಡಿ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದ್ದಾರೆ.

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ತಂತ್ರ ವಿಧಾನಗಳ ಕಾಯ್ದೆ (ಲಿಂಗ ಆಯ್ಕೆ ನಿಷೆಧ) ೧೯೯೪ ರಡಿಯಲ್ಲಿ ಹೊಸ ಸ್ಕ್ಯಾನಿಂಗ್ ಕೇಂದ್ರವನ್ನು ಜಿಲ್ಲಾ ನೋಂದಣಿ ಪ್ರಾಧಿಕಾರದಿಂದ ನೋಂದಣಿ ಮಾಡಿಸಬೇಕು ಹಾಗೂ ಸ್ಕ್ಯಾನಿಂಗ್ ಯಂತ್ರ ಖರೀದಿಸಲು, ಬೇರೆಕಡೆ ಸ್ಥಳಾಂತರಿಸಲು ಜಿಲ್ಲಾ ನೋಂದಣಿ ಪ್ರಾಧಿಕಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಭ್ರೂಣ ಲಿಂಗ (ಗರ್ಭಸ್ಥ ಶಿಶು) ಪತ್ತೆ ಹಾಗೂ ಬಹಿರಂಗ ಪಡಿಸುವುದು ಕಾಯ್ದೆಯಡಿ ನಿ?ಧಿಸಲಾಗಿದ್ದು, ಭ್ರೂಣ ಲಿಂಗ ಪತ್ತೆಗಾಗಿ ಯಾರೇ ಒತ್ತಾಯಿಸಿದರೂ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುವುದು. ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಭಾಷೆಯಲ್ಲಿ (ಕನ್ನಡ) ಭ್ರೂಣಲಿಂಗ ಪತ್ತೆ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬ ಮಾಹಿತಿಯನ್ನು ಸ್ಕ್ಯಾನಿಂಗ್ ಕೇಂದ್ರದಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಗರ್ಭಿಣಿಯರ ಸ್ಕ್ಯಾನಿಂಗ್ ವಿವರಗಳ ದಾಖಲಾತಿ ವಹಿಯನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ನಿರ್ವಹಿಸಬೇಕು.

ಗರ್ಭಿಣಿಯರ ಸ್ಕ್ಯಾನಿಂಗ್‌ಗೂ ಮೊದಲು ಅವರ ಅನುಮತಿಯನ್ನು ಲಿಖಿತವಾಗಿ ಪಡೆಯಬೇಕು. ಬಾಲಿಕಾ ತಂತ್ರಾಂಶದಲ್ಲಿ ಗರ್ಭೀಣಿಯರ ಸಂಪೂರ್ಣ ಮಾಹಿತಿಯನ್ನು ಫಾರಂ ಎಫ್ ರಲ್ಲಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಫಾರಂ ಎಫ್ ರಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರ ಮೊಹರು ಮತ್ತು ಸಹಿ ಇರಬೇಕು. ಪ್ರತಿ ಗರ್ಭಿಣಿಯ ಸ್ಕ್ಯಾನಿಂಗ್ ರೆಫೆರಲ್ ಚೀಟಿ ಮತ್ತು ಕಾರಣ ಇರಲೇಬೇಕು. ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯ ಪುಸ್ತಕದ ಪ್ರತಿ ಇರಬೇಕು. ಸ್ಕ್ಯಾನಿಂಗ್ ಮಾಡುವ ವೈದ್ಯರ ಪದವಿ ಪ್ರಮಾಣ ಪತ್ರ ಹಾಗೂ ಸ್ಕ್ಯಾನಿಂಗ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ದಿನಗಳು ಹಾಗೂ ಸಮಯವನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು.

ಸ್ಕ್ಯಾನಿಂಗ್ ಕೇಂದ್ರಕ್ಕೆ ಬರುವ ರೋಗಿಗಳಿಗೆ (ಗರ್ಭಿಣಿಯರಿಗೆ) ಸೂಕ್ತ ಸೇವೆ ನೀಡಲು ಅವಶ್ಯಕವಾದ ಗಾಳಿ ಬೆಳಕಿನಿಂದ ಕೂಡಿದ ಕೊಠಡಿ, ಶೌಚಾಲಯದ ವ್ಯವಸ್ಥೆ ಇದ್ದು ಸ್ವಚ್ಚವಾಗಿರಬೇಕು. ಸ್ಕ್ಯಾನಿಂಗ್ ಮಾಡುವ ಕೊಠಡಿಯಲ್ಲಿ ಹಾಗೂ ಕೇಂದ್ರದ ಆವರಣದಲ್ಲಿ ಯಾವುದೇ ಸೂಚನಾತ್ಮಕ ಚಿತ್ರಗಳು, ಮಕ್ಕಳ ಚಿತ್ರ, ದೇವರ ಚಿತ್ರಗಳನ್ನು ಪ್ರದರ್ಶಿಸಬಾರದು. ಸ್ಕ್ಯಾನಿಂಗ್ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳಿಗೆ ಪ್ರತ್ಯೇಕ ಕಡತ ನಿರ್ವಹಿಸಬೇಕು. ಉಪಯೋಗಿಸದೆ ಇರುವ ಸ್ಕ್ಯಾನಿಂಗ್ ಯಂತ್ರಗಳು ಇದ್ದಲ್ಲಿ ತಕ್ಷಣ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಅಫಿಡವಿಟ್ ಸಲ್ಲಿಸುವ ಮೂಲಕ ಮಾಹಿತಿ ನೀಡಬೇಕು.

ಈ ಕಾಯ್ದೆಗೆ ವಿರುದ್ಧವಾದ ಯಾವುದೇ ರೀತಿಯ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಮತ್ತು ಸಂಬಂಧ ಪಟ್ಟವರು ಜಿಲ್ಲಾ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ ೧೦೯೭, ೦೮೨೨೬-೨೨೩೧೬೧, ೦೮೨೨೬-೨೨೩೧೬೩ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular