ಮೈಸೂರು: ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಎಂ.ಎಂ.ಕೆ ಮತ್ತು ಎಸ್.ಡಿ.ಎಂ. ಬಾಲಕಿಯರ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮೈಸೂರು ಜಿಲ್ಲಾಮಟ್ಟದ ಬಾಲಕ ಮತ್ತು ಬಾಲಕಿಯರ ಟೇಬಲ್ ಟೆನ್ನಿಸ್, ಚೆಸ್ ಮತ್ತು ಯೋಗಾಸನ ಸ್ಪರ್ಧೆಗಳು ನಡೆದವು.
ಬಾಲಕಿಯರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಯುನಿಟಿ ಪದವಿಪೂರ್ವ ಕಾಲೇಜು, ನಂಜನಗೂಡು ವಿದ್ಯಾರ್ಥಿನಿಯರಾದ ಕು. ಸುಭಿಕುಮಾರಿ ಪಾಂಡೆ ಮತ್ತು ಕು. ಸ್ನೇಹ ಶ್ರೀ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾರೆ. ಹಾಗೂ ರಿಧಮಿಕ್ ಯೋಗದಲ್ಲಿ ವಿಸ್ಡಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕು. ವರ್ಷಿಣಿ ಸಿ ಪಿ ಬಹುಮಾನ ಗಳಿಸಿರುತ್ತಾರೆ
ಬಾಲಕರ ವಿಭಾಗದ ಯೋಗ ಸ್ಪರ್ಧೆಯಲ್ಲಿ ವಿಸ್ಡಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚಿ. ಕವೀಶ್ ಪ್ರಥಮ ಸ್ಥಾನ ಗಳಿಸಿದರೆ , ಜೆ.ಎಸ್.ಎಸ್. ಪದವಿಪೂರ್ವ ಕಾಲೇಜು ನಂಜನಗೂಡು ವಿದ್ಯಾರ್ಥಿ ಚಿ. ಪುನೀತ್ ಡಿ. ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಹಾಗೂ ರಿಧಮಿಕ್ ಯೋಗದಲ್ಲಿ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಯಾದ ಚಿ. ಮಯೂರ್ ಟಿ. ಮತ್ತು ಆರ್ಟಿಸ್ಟಿಕ್ ಯೋಗದಲ್ಲಿ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚಿ. ಯಶ್ವಂತ್ ಪಿ. ಬಹುಮಾನ ಗಳಿಸಿರುತ್ತಾರೆ.
ಟೇಬಲ್ ಟೆನ್ನಿಸ್ ಸ್ಪರ್ಧೆ : ಬಾಲಕಿಯರ ವಿಭಾಗದಲ್ಲಿ ಬೇಸ್ ಪದವಿಪೂರ್ವ ಕಾಲೇಜಿನ ಕು. ಮಾನಸ ಎಸ್ ತಂಡದ ವಿದ್ಯಾರ್ಥಿನಿಯರು ಪ್ರಥಮ ಬಹುಮಾನ ಪಡೆದರೆ, ಟೆರಿಷಿಯನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕು. ವಚನ ಎನ್ ಎಸ್. ತಂಡದ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಟೇಬಲ್ ಟೆನ್ನಿಸ್ ಸ್ಪರ್ಧೆ : ಬಾಲಕರ ವಿಭಾಗದಲ್ಲಿ ಎಸ್.ಆರ್.ಕೆ.ವಿ.ಎಸ್ ಪದವಿಪೂರ್ವ ಕಾಲೇಜಿನ ಚಿ. ಕೇತನ್ ಕೆ. ಕುಲಕರ್ಣಿ ತಂಡದ ವಿದ್ಯಾರ್ಥಿ ಪ್ರಥಮ ಬಹುಮಾನ ಪಡೆದರೆ, ಬೇಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚಿ. ಶರಣ್ ಆರ್. ನಾಡಿಗ್ ತಂಡದ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಚೆಸ್ ಸ್ಪರ್ಧೆ: ಬಾಲಕಿಯರ ವಿಭಾಗದಲ್ಲಿ ಜ್ಞಾನೋದಯ ಪದವಿಪೂರ್ವ ಕಾಲೇಜಿನ ಕು. ಶರಧಿ ಶಾಸ್ತ್ರಿ ಪ್ರಥಮ ಹಾಗೂ ಬೇಸ್ ಪದವಿ ಪೂರ್ವ ಕಾಲೇಜಿನ ಕು. ಸಿಂಚನ ದ್ವಿತೀಯ ಬಹುಮಾನ ಗಳಿಸಿದರು.
ಚೆಸ್ ಸ್ಪರ್ಧೆ : ಬಾಲಕರ ವಿಭಾಗದಲ್ಲಿ ಜ್ಞಾನೋದಯ ಪದವಿಪೂರ್ವ ಕಾಲೇಜಿನ ಚಿ. ಕಾರ್ತಿಕ್ ಪಿ ಪ್ರಥಮ ಹಾಗೂ ಬೇಸ್ ಪದವಿ ಪೂರ್ವ ಕಾಲೇಜಿನ ಚಿ. ಅನುರಾಗ್ ಆರ್. ಪಿ. ದ್ವಿತೀಯ ಬಹುಮಾನ ಗಳಿಸಿದರು.
ಬಹುಮಾನ ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲ ನಯನಕುಮಾರಿ ಹಾಗೂ ಮೈಸೂರು ಜಿಲ್ಲಾ ಕ್ರೀಡಾ ಸಂಚಾಲಕ ಮುರಳೀಧರ್ ಅವರು ಬಹುಮಾನವನ್ನು ವಿತರಿಸಿದರು. ದೈಹಿಕ ವಿಭಾಗದ ಮುಖ್ಯಸ್ಥರಾದ ಮಾಲತಿ ಉಪಸ್ಥಿತರಿದ್ದರು.