ಚಾಮರಾಜನಗರ: ಜಿಲ್ಲಾಮಟ್ಟದ ೨೦೨೫-೨೬ನೇ ಸಾಲಿನ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ ೧೦ ಮತ್ತು ೧೧ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸೆಪ್ಟೆಂಬರ್ ೧೦ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬ್ಬಡಿ, ಥ್ರೋಬಾಲ್, ಫುಟ್‌ಬಾಲ್, ಯೋಗಾಸನ (ಪಾದಹಸ್ತಾಸನ, ಆಕರ್ಣ ಧನುರಾಸನ, ಊರ್ಧ್ವಧನುರಾಸನ, ಅರ್ಧ ಮತ್ಸೇಂದ್ರಾಸನ) ಹಾಗೂ ಸೆಪ್ಟೆಂಬರ್ ೧೧ರಂದು ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಹ್ಯಾಂಡ್‌ಬಾಲ್, ನೆಟ್‌ಬಾಲ್, ಕುಸ್ತಿ, ಈಜು, ಹಾಕಿ ಹಾಗೂ ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಕಾಲೇಜು ಮೈದಾನದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡೆಗಳು ನಡೆಯಲಿವೆ.
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ (ರಿಲೇ ಒಳಗೊಂಡAತೆ) ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ತಾಲ್ಲೂಕು ಕೇಂದ್ರದಿAದ ಹೋಗಿ ಬರುವ ಕನಿಷ್ಠದರ ಪ್ರಯಾಣ ಭತ್ಯೆಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಕ್ರೀಡಾಪಟುಗಳು ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು ಉಪಹಾರ ನೀಡಲಾಗುವುದು.
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆನ್‌ಲೈನ್ ನೋಂದಾವಣೆ ಆಗಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಅಧಿಕೃತ ಮೊಬೈಲ್ ಆಪ್, ವೆಬ್ ಪೋರ್ಟಲ್‌ನಲ್ಲಿ hಣಣಠಿs://ಜಚಿsಚಿಡಿಚಿಛಿmಛಿuಠಿ-೨೦೨೫.eಣಡಿಠಿiಟಿಜiಚಿ.ಛಿom/ಏಂ-sಠಿoಡಿಣs ಮೂಲಕ ಕಡ್ಡಾಯವಾಗಿ ಅಪ್‌ಡೇಟ್ ಮಾಡಿಕೊಂಡ ಪ್ರತಿಯನ್ನು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ವರದಿ ಮಾಡಿಕೊಳ್ಳಲು ಕಡ್ಡಾಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂ.ಸಂ. ೦೮೨೨೬-೨೨೪೯೩೨ ಅಥವಾ ಮೊ.ಸಂ. ೯೯೧೬೪೬೬೬೫೯, ೯೩೫೩೭೧೫೦೫೩, ೯೯೪೫೬೧೫೬೯೫, ೯೮೮೦೨೧೧೦೨೭ ಸಂಪರ್ಕಿಸುವAತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.