Monday, February 16, 2026
Google search engine

Homeರಾಜ್ಯಡಿಕೆಶಿ ನವರಂಗಿ ಆಟ ಆಡ್ತಾರೆ ಬಿಜೆಪಿಯಲ್ಲ: ಸಿ.ಟಿ.ರವಿ ಕಿಡಿ

ಡಿಕೆಶಿ ನವರಂಗಿ ಆಟ ಆಡ್ತಾರೆ ಬಿಜೆಪಿಯಲ್ಲ: ಸಿ.ಟಿ.ರವಿ ಕಿಡಿ

ಮಂಡ್ಯ: ಡಿಕೆಶಿ ನವರಂಗಿ ಆಟ ಆಡ್ತಾರೆ ಬಿಜೆಪಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವೆ ಪಾದಯಾತ್ರೆ ಮಾಡಿ, ನೀವೆ ನೀರು ಬಿಟ್ಟಿದ್ದೀರಿ. ಈಗ ಆಡ್ತಿರೋದು ನವರಂಗಿ ಆಟ ತಾನೆ ಎಂದು ಹರಿಹಾಯ್ದಿದ್ದಾರೆ.

ಮಂಡ್ಯದಲ್ಲಿ ಜನ ನಿಮಗೆ ಹೆಚ್ವು ಸ್ಥಾನ ಕೊಟ್ಟಿದ್ದಾರೆ. ಈಗ ಮಂಡ್ಯದ ಜನರಿಗೆ ನೀವು ಮಾಡ್ತಿರೋದು ಏನು. ಕೋರ್ಟ್ ಗೆ ರಾಜ್ಯದ ಪರಿಸ್ಥಿತಿಯನ್ನ ಮನವರಿಕೆ ಮಾಡಬೇಕು. ಆ ಕೆಲಸವನ್ನ ಇವರು ಮಾಡ್ತಿದ್ದಾರಾ ? ಎಂದು ಪ್ರಶ್ನಿಸಿದರು.

ಎಸ್.ಟಿ.ಸೋಮಶೇಖರ್ ಅವರನ್ನು ಕಾಂಗ್ರೆಸ್ ನವರು ಸಂಪರ್ಕ ಮಾಡಿರೋದು ನಿಜ. ಆದರೆ ಎಸ್.ಟಿ.ಸೋಮಶೇಖರ್ ಹೋಗಲ್ಲ ಅಂದಿದ್ದಾರೆ. ಕಾಂಗ್ರೆಸ್ ನವರಿಗೆ 136ಸ್ಥಾನ ಸಿಕ್ಕಿದೆ. ಇಷ್ಟಿದ್ದರೂ ಅವರು ಆಪರೇಷನ್ ಹಸ್ತ ಮಾಡ್ತಿದ್ದಾರೆ ಅಂದ್ರೆ ನೀವೆ ಯೋಚನೆ ಮಾಡಿ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular