Saturday, August 16, 2025
Google search engine

Homeರಾಜ್ಯಧರ್ಮಸ್ಥಳ ಛಲೋ ಅಭಿಯಾನಕ್ಕೆ ಡಿಕೆ ಶಿವಕುಮಾರ್ ಕಿಡಿ : “ಹಿಂದುತ್ವ ಯಾರದೇ ಆಸ್ತಿ ಅಲ್ಲ”

ಧರ್ಮಸ್ಥಳ ಛಲೋ ಅಭಿಯಾನಕ್ಕೆ ಡಿಕೆ ಶಿವಕುಮಾರ್ ಕಿಡಿ : “ಹಿಂದುತ್ವ ಯಾರದೇ ಆಸ್ತಿ ಅಲ್ಲ”

ಬೆಂಗಳೂರು : ಧರ್ಮಸ್ಥಳದ ಕುರಿತು ಅಪಪ್ರಚಾರ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಸುಮಾರು 300ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳ ಛಲೋ ಅಭಿಯಾನ ಆರಂಭಿಸಿದೆ ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿಕಾರಿದ್ದು, ಬಿಜೆಪಿಯವರು ಹಿಂದುತ್ವವನ್ನು ತಮ್ಮ ಆಸ್ತಿ ಅಂದುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆ ಆರಂಭಕ್ಕೂ ಮೊದಲು ಬಿಜೆಪಿಯವರು ಧರ್ಮಸ್ಥಳದ ಕುರಿತು ಯಾಕೆ ಮಾತನಾಡಿಲ್ಲ? ಬಿಜೆಪಿಯವರು ಈಗ ರಾಜಕೀಯ ಮಾಡುತ್ತಿದ್ದಾರೆ. ತನಿಖೆ ಆರಂಭಕ್ಕೂ ಮೊದಲು ಅವರು ಏನಾದರೂ ಮಾತಾಡಬೇಕಿತ್ತು, ಬಿಜೆಪಿಯವರು ಹಿಂದುತ್ವ ತಮ್ಮ ಮನೆ ಆಸ್ತಿ ಅಂತ ಅಂದುಕೊಂಡಿದ್ದಾರೆ. ಹಿಂದುತ್ವ ಯಾರ ಆಸ್ತಿಯೂ ಅಲ್ಲ ಅವರವರ ಭಕ್ತಿ ಹಾಗೂ ನಂಬಿಕೆಯ ಮೇಲೆ ಇದೆ ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದರು.

ಬಿಜೆಪಿಯವರು ರಾಜಕಾರಣ ಬಿಟ್ಟು ಬೇರೇನು ಮಾತಾಡಲ್ಲ. ನಾವು ಎಸ್ಐಟಿ ರಚನೆ ಮಾಡಿದಾಗ ಬಿಜೆಪಿ ಅವರು ಯಾಕೆ ಕೇಳಲಿಲ್ಲ? ದೂರು ಕೊಟ್ಟಾಗ ಯಾಕೆ ಹೇಳಲಿಲ್ಲ? ಒಬ್ಬರು ಕೂಡ ಇದರ ಕುರಿತು ಮಾತನಾಡಲಿಲ್ಲ ಬಿಜೆಪಿ ಅವರಿಗೆ ಧರ್ಮಸ್ಥಳದ ಬಗ್ಗೆ ಪ್ರೀತಿ ಇಲ್ಲ ಬಿಜೆಪಿ ಅವರಿಗೆ ರಾಜಕಾರಣ ಮಾಡುವುದಕ್ಕೆ ಧರ್ಮಸ್ಥಳ ಬೇಕು. ಆದರೆ ನಮಗೆ ರಾಜಕಾರಣ ಮಾಡಲು ಧರ್ಮಸ್ಥಳ ಬೇಡ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular