Friday, May 23, 2025
Google search engine

Homeರಾಜಕೀಯಡಿ ಕೆ ಶಿವಕುಮಾರ್ ತಮಿಳುನಾಡಿನ ಪರ ನಿಂತಿದ್ದಾರೆ: ಅಶ್ವಥ್ ನಾರಾಯಣ್ ಕಿಡಿ

ಡಿ ಕೆ ಶಿವಕುಮಾರ್ ತಮಿಳುನಾಡಿನ ಪರ ನಿಂತಿದ್ದಾರೆ: ಅಶ್ವಥ್ ನಾರಾಯಣ್ ಕಿಡಿ

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶ ಬರೋ ಮುನ್ನ ಇವರೇ ನಿರ್ಧಾರ ತೆಗೆದುಕೊಳ್ತಾರೆ. ಡಿ ಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ಇಲ್ಲ. ತಮಿಳುನಾಡಿನ ಪರ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೀರಾವರಿ ಸಚಿವ ಕರ್ನಾಟಕದ ನೀರಾವರಿ ಮಂತ್ರಿನಾ?  ಎಂದು ಪ್ರಶ್ನಿಸಿದರು.

ಡಿಕೆಶಿ ಸಭೆ ಕರೆಯದೆ ನೇರವಾಗಿ ನೀರು ಬಿಟ್ಟಿದ್ದಾರೆ. ನೀರಾವರಿ ಸಲಹಾ ಸಮಿತಿಯ ಸಭೆ ಕರೆಯದೆ ನೀರು ಬಿಟ್ಟಿರುವುದು ಸರಿಯಲ್ಲ. ಸಂಕಷ್ಟ ಸೂತ್ರದ ಬಗ್ಗೆಯೂ ಸಹ ನಿರ್ಧಾರ ಕೈಗೊಂಡಿಲ್ಲ ಎಂದು ಹರಿಹಾಯ್ದರು.

ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ಹೋದ ಸಂದರ್ಭದಲ್ಲಿ ತಮಿಳುನಾಡಿನ ಅಧಿಕಾರಿಗಳು ಬಾಯ್ ಕಟ್ ಮಾಡ್ತಾರೆ. ನೀರಾವರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲ. 1.8 ಎಕ್ಟೆರ್ ಮಾತ್ರ ತಮಿಳುನಾಡಿನವರು ಬೆಳೆ ಬೆಳೆಯಬೇಕು. ಆದರೆ 3 ಎಕ್ಟೆರ್ ಹೆಚ್ಚು ಬೆಳೆ ಬೆಳೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಗೆ ಕಾವೇರಿ ವಾಟರ್ ಮ್ಯಾನೆಜ್‌ ಮೆಂಟ್‌ ಅವರು ಒಂದು ಅಫಿಡಿವಿಟ್ ಸಲ್ಲಿಕೆ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಉಡಾಫೆಯಾಗಿ ಮಾತನಾಡುತ್ತಾರೆ. ಮೇಕೆದಾಟು ಯೋಜನೆ ಮಾತ್ರ ಇದಕ್ಕೆ ಪರಿಹಾರ ಅಂತಾರೆ ಎಂದು ಆರೋಪಿಸಿದರು.

ನೆನ್ನೆ ಸುಪ್ರೀಂ ಕೋರ್ಟ್ ತೀರ್ಪು ಬರಬೇಕಿತ್ತು ಬರಲಿಲ್ಲ ಮುಂದೂಡಿದ್ದಾರೆ. 12ನೇ ತಾರಿಕು ವರೆಗೆ ನೀರು ಬಿಡ್ತಿವಿ ಅಂತ ಇವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರಕ್ಕೆ ಬೇಜವಬ್ದಾರಿ ಇದೆ. ಸರ್ಕಾರಕ್ಕೆ ಮಂಡ್ಯ ಜನರ ಮೇಲೆ ಕಾಳಜಿ ಇಲ್ಲ. ಬೊಮ್ಮಯಿ ಅವರು ಮಹಾದಾಯಿ ಪರವಾಗಿ ಅರ್ಜಿ ಹಾಕಿ ಅಂತಿದ್ದಾರೆ ಹಾಕ್ತಿಲ್ಲ. ಇವರು ಬರಿ ಸಭೆ  ಮಾಡ್ಕೊಂಡಿದ್ದಾರೆ ಎಂದರು.

ನಾಳೆ ಕೆ.ಆರ್ ಎಸ್ ಡ್ಯಾಂಗೆ ಮಾಜಿ ಸಿಎಂ ಬಸವರಾಜು ಬೊಮ್ಮಯಿ ಭೇಟಿ.

ನಾಳೆ ಮಧ್ಯಾಹ್ನ 2.30ಕ್ಕೆ  ಬಸವರಾಜು ಬೊಮ್ಮಯಿ ಕೆಆರ್ ಎಸ್ ಗೆ ಬರಲಿದ್ದಾರೆ. ಕೆಲವು ಸಭೆ ನಡೆಸಿ ಪರಿಶೀಲನೆ ನಡೆಸಲಿದ್ದಾರೆ. ಡ್ಯಾಂ ವಸ್ತುಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಭೇಟಿ ನೀಡಲಿದ್ದು, ಸ್ಥಳೀಯ ಪರಿಸ್ಥಿತಿ, ನಾಟಿ, ಭಿತ್ತನೆ ಕಾರ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಬೊಮ್ಮಯಿಗೆ ಮಂಡ್ಯ, ಮೈಸೂರು, ಹಾಸನ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವ ಸಚಿವ ಕೆ.ಗೋಪಾಲಯ್ಯ, ಗೋವಿಂದ ಕಾರಜೋಳ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ತಿಳಿಸಿದರು.

RELATED ARTICLES
- Advertisment -
Google search engine

Most Popular