Saturday, May 24, 2025
Google search engine

Homeರಾಜಕೀಯಡಿ ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ‌: ಜಿ ಟಿ ದೇವೇಗೌಡ...

ಡಿ ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ‌: ಜಿ ಟಿ ದೇವೇಗೌಡ ಆರೋಪ

ಮೈಸೂರು: ಡಿ ಕೆ ಶಿವಕುಮಾರ್ ಅಪ್ಪಣೆ ಪಡೆದು ಡ್ರೈವರ್ ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ‌. ಕಾರ್ತಿಕ್ ನನ್ನು ಹೊರ ದೇಶಕ್ಕೆ ಕಳಿಸಿದ್ದು ಕಾಂಗ್ರೆಸಿಗರು ಎಂದು ಶಾಸಕ ಜಿ ಟಿ ದೇವೇಗೌಡ ಆರೋಪಿಸಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ ಟಿ ದೇವೇಗೌಡ ಅವರು, ಪ್ರಜ್ವಲ್ ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು, ಯಾರನ್ನು ಎ.1 ಮಾಡಬೇಕು ಯಾರನ್ನು ಎ. 2 ಮಾಡಬೇಕು ಎಂಬ ನಿರ್ದೇಶನ ಸಿಎಂ ಹಾಗೂ ಡಿಸಿಎಂ ನೀಡಿ ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಹಗರಣ ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.ಡಿಸಿಎಂ ಈ ವಿಚಾರದಲ್ಲಿ ಸಂಪೂರ್ಣ ನೇತೃತ್ವವಹಿಸಿ ದ್ದಾರೆ. ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ ಹಾಗಾಗಿ‌ ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೆ ಸರಕಾರ ಅವರನ್ನು ವಜಾ ಮಾಡಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಾರಾ ಮಹೇಶ್ ಮಾತನಾಡಿ, ರೇವಣ್ಣ ವಿರುದ್ದ ಕೆ.ಆರ್. ನಗರದಲ್ಲಿ ಕೇಸ್ ದಾಖಲು ಆಗವುದಕ್ಕೆ ಮುಂಚೆ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು? ಎಂದು ಪ್ರಶ್ನಿಸಿದರು.

ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಯಾಕೆ ಬಂದಿಲ್ಲ? ಎಂದ ಅವರು ಸಂತ್ರಸ್ತ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ. ಹುಣಸೂರಿನ ಕರಿಗೌಡ ರಸ್ತೆಯಲ್ಲಿ ಪವಿತ್ರ ಹರೀಶ್ ಅವರ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ಪೊಲೀಸರು ಕರೆದು ಕೊಂಡು ಹೋಗಿದ್ದಾರೆಂದು ಅವರು ತಿಳಿಸಿದರು.

ಎಸ್ ಐ ಟಿಯಲ್ಲಿ ಇರುವ ಕೆಲ ಅಧಿಕಾರಿಗಳು ಕಾಂಗ್ರೆಸ್ ನ ಕೈ ಗೊಂಬೆ ರೀತಿ ವರ್ತಿಸುತ್ತಿದ್ದಾರೆಂದು ಸಾರಾ ಮಹೇಶ್ ಆರೋಪಿಸಿದರು.

ಸಂತ್ರಸ್ತ ಮಹಿಳೆಯನ್ನು ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ? ಎಂದವರು ಪ್ರಶ್ನಿಸಿ,ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದು ಕೊಂಡು ಹೋಗಿದ್ದಿರಾ? ಎಂದರು. ಎಸ್ ಐ ಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ‌ ಎಂದು ಅವರು ಪ್ರಶ್ನಿಸಿದರು.

ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಲ್ಲ. ರಕ್ಷಿಸಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ  ನಿವೃತ್ತಿ ಪಡೆಯುತ್ತೇನೆ ಎಂದು ಸಾರಾ ಮಹೇಶ್ ಸವಾಲು ಹಾಕಿದರು.

RELATED ARTICLES
- Advertisment -
Google search engine

Most Popular