Saturday, June 21, 2025
Google search engine

Homeರಾಜ್ಯಸುದ್ದಿಜಾಲರಾಮನಗರದಲ್ಲಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

ರಾಮನಗರದಲ್ಲಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ


ರಾಮನಗರ: ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ೫೯೩ ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಡಿಕೆ ಸುರೇಶ್ ಅವರು ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ೩೩೮ ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್ ಅವರು ಈ ಬಾರಿ ಒಟ್ಟು ೧೦೬.೭೧ ಕೋಟಿ ರೂ. ಚರಾಸ್ತಿ, ಒಟ್ಟು ೪೮೬.೩೩ ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ. ಕಳೆದ ೫ ವರ್ಷಗಳಲ್ಲಿ ಡಿ.ಕೆ.ಸುರೇಶ್ ಅವರ ಆಸ್ತಿಯಲ್ಲಿ ಸುಮಾರು ೨೫೯.೧೯ (೭೫%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ.
ತನ್ನ ಬಳಿ ಒಟ್ಟು ೨೧,೩೫,೫೦೦ ರೂ. ಮೌಲ್ಯದ ೧೨೬೦ ಗ್ರಾಂ ಚಿನ್ನ ಮತ್ತು ೨,೧೦,೦೦೦ ರೂ. ಮೌಲ್ಯದ ೪೮೮೬ ಗ್ರಾಂ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ.ಒಟ್ಟು ೩೨,೭೫,೫೦,೪೭೨ ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದರೆ ೨೧೦,೪೭,೬೮,೧೫೯ ರೂ. ಮೌಲ್ಯದ ಕೃಷಿಯೆತರ ಭೂಮಿಯನ್ನು ಹೊಂದಿದ್ದಾರೆ. ಒಟ್ಟು ೨೧೧,೯೧,೪೧,೮೮೮ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್ ಹೊಂದಿದ್ದಾರೆ.

RELATED ARTICLES
- Advertisment -
Google search engine

Most Popular