ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರ ಭಾರಿ ಸೌಂಡ್ ಮಾಡುತ್ತಿದೆ. ಈ ವೇಳೆ ಮಲ್ಲಿಕಾರ್ಜುನ್ ಖರ್ಗೆಯವರ ಸೂಚನೆಗೂ ಮೀರಿ ಟ್ವಿಟರ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡು ಪರೋಕ್ಷವಾಗಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಪರವಾಗಿ, ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಡಿಕೆ ಸುರೇಶ್ ಅವರು ದೆಹಲಿಗೆ ತೆರಳಿದ್ದಾರೆ.
ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೂ ದೆಹಲಿಯಿಂದ ಬುಲಾವ್ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ತಂತ್ರಕ್ಕೆ ಪ್ರತಿ ತಂತ್ರಗಳನ್ನು ಎರಡು ಬಣ ಹೂಡುತ್ತಿದೆ. ದೆಹಲಿಗೆ ರಾಜ್ಯ ನಾಯಕರು ತೆರಳುವುದಕ್ಕೂ ಮೊದಲೇ ಡಿಕೆ ಸುರೇಶ್ ದಿಲ್ಲಿ ವಿಮಾನ ಏರಿರುವುದು ಡಿಕೆಶಿ ಪರವಾಗಿ ಸಂದೇಶ ರವಾನೆ ಮಾಡುವ ಉದ್ದೇಶ ಇದ್ಯಾ ಎಂಬುದು ಇದೀಗ ಚರ್ಚೆಗೀಡಾಗಿದೆ.
ಕೊನೆಯ ಹಂತದ ಕಸರತ್ತು:
ಅಧಿಕಾರ ಹಸ್ತಾಂತರ ಹಗ್ಗ-ಜಗ್ಗಾಟದಲ್ಲಿ ಡಿಕೆಶಿ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದು, ದೆಹಲಿಯಲ್ಲಿ ಶನಿವಾರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸರಣಿ ಸಭೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಸ್ವಾಮೀಜಿಗಳು, ಮಠಾಧಿಪತಿಗಳು ಹಾಗೂ ಸಮುದಾಯದ ಮುಖಂಡರು ಅಖಾಡಕ್ಕೆ ಇಳಿದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪರವಾಗಿ ಹೇಳಿಕೆಯನ್ನು ಕೊಡಲು ಶುರು ಮಾಡಿದ್ದಾರೆ.
ಇನ್ನೂ ದೆಹಲಿ ಪ್ರಯಾಣದ ಬಗ್ಗೆ ಡಿಕೆ ಶಿವಕುಮಾರ್ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದು, ದೆಹಲಿ ನಮಗೆ ದೇವಸ್ಥಾನ ಇದ್ದಂತೆ ಎಂದು ಹೇಳಿದ್ದಾರೆ. ದೆಹಲಿ ನಮಗೆ ಮಾರ್ಗದರ್ಶನ ಮಾಡುತ್ತೆ. ಯಾವಾಗ ದೆಹಲಿಗೆ ಹೋಗುತ್ತೆವೆ ಆವಾಗ ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.



