ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆಯೇ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಡಿಕೆಶಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಲ್ಲಿನ ಅಸ್ಪತ್ರೆ ವೃತ್ತದಲ್ಲಿ ಯುವ ಕಾಂಗ್ರೇಸ್ ಮುಖಂಡ ಡೈರಿಮಾದು ನೇತೃತ್ವದಲ್ಲಿ ಸಮಾವೇಶ ಗೊಂಡ ಕಾಂಗ್ರೇಸ್ ಕಾರ್ಯಕರ್ತರು ಸಹಿ ಹಂಚಿ ಡಿ.ಕೆ.ಶಿವಕುಮಾರ್ ಅವರಿಗೆ ಜಯಕಾರಕೂಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಯುವ ಕಾಂಗ್ರೇಸ್ ಮುಖಂಡ ಡೈರಿಮಾದು ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆಗೆ ಮುಖ್ಯಮಂತ್ರಿ ಸ್ಥಾನ ದೊರೆತ್ತಿದ್ದು ಇವರ ಅಧಿಕಾರದ ಅವಧಿಯಲ್ಲಿ ರೈತಪರ ಕೆಲಸ ಮಾಡಿ ಕೆ.ಅರ್.ನಗರ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿ ಯುವ ಶಾಸಕ ಡಿ.ರವಿಶಂಕರ್ ಅವರ ಕೈ ಬಲ ಪಡಿಸಬೇಕೆಂದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಲತಾಪ್ರಭಾಕರ್, ಹೊಸೂರು ಡೈರಿ ಮಾಜಿ ಅಧ್ಯಕ್ಷರಾದ ಎಚ್.ಅರ್.ಪರುಶುರಾಮ್,ಎಚ್.ಎಸ್.ರವಿ,ಗ್ರಾ.ಪಂ.ಮಾಜಿ ಸದಸ್ಯ ಸಾಧಿಕ್ ಪಾಷ, ಸೊಸೈಟಿನಾಗರಾಜು,ಹೊಸೂರು ಬಲರಾಮ್, ಮುಖಂಡರಾದ ಹಳಿಯೂರು ಮಾರುತಿ, ಪ್ರವೀಣ, ಕಾಂತರಾಜು, ದಿಡ್ಡಹಳ್ಳಿ ಬಲರಾಮ್, ಗಂಗಾಧರ್, ವೆಂಕಟೇಶ್, ಟ್ಯೂಬ್ ಹರೀಶ್, ಗ್ಯಾರಂಟಿ ಯೋಜನೆಯ ಮಹಾಲಿಂಗಣ್ಣ, ಜಬೀವುಲ್ಲಾ, ಸೇರಿದಂತೆ ಮತ್ತಿತರರು ಹಾಜರಿದ್ದರು.



