ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರು ಹಾಗೂ ಕೆಪಿಸಿಸಿ ಕಾರ್ಯಕಾರಣಿ ಸದಸ್ಯರಾದ ದೊಡ್ಡಸ್ವಾಮೇಗೌಡರ 75ನೇ ವರ್ಷದ ಜನ್ಮ ದಿನೋತ್ಸವವನ್ನು ಅವರ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಭಿನ್ನ ಮತ್ತು ವಿಶಿಷ್ಠ ರೀತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದರು.

ಪಟ್ಟಣದ ಪುರಸಭೆ ಬಯಲು ರಂಗಮಂದಿರ ದಲಿ ಭಾನುವಾರ ದೊಡ್ಡ ಸ್ವಾಮೇಗೌಡರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅವರ 75ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮುಂಜಾನಾಯಿಂದಲೇ ಹುಟ್ಟುರಾದ ಕೆಸ್ತೂರು ಕೊಪ್ಪಲಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ನಂತರ ಚುಂಚನಕಟ್ಟೆಯ ಶ್ರೀರಾಮ ದೇವಾಲಯದಲ್ಲಿ ಪೂಜೆ, ಕೆ.ಆರ್.ನಗರದ ಹಳೆ ಎಡತೊರೆಯ ಅರ್ಕೇಶ್ವರ ಸ್ವಾಮಿ ದೇವಾಲಯ, ಖಾದರ್ ಲಿಂಗಾವಲಿಯವರ ಸಮಾದಿಗೆ ಪೂಜೆ, ಆಂಜನೇಯ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯ ಪೂಜೆ, ಬಸವೇಶ್ವರ ಬಡಾವಣೆಯ ಮಲೆ ಮಹದೇಶ್ವರ ಸ್ವಾಮಿ ದೆವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.
ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೃಹತ್ ಉದ್ಯೋಗ ಮೇಳ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಆಡಂಬರ ಮಾಡುವುದು ಮುಖ್ಯವಲ್ಲ ಆ ಆಚರಣೆ ಮೂಲಕ ಬಡವರಿಗೆ ಆರೋಗ್ಯ ಯುವಕರಿಗೆ ಉದ್ಯೋಗ ನೀಡುವ ಕೆಲಸ ದೊಡ್ಡ ಸ್ವಾಮಿಗೌಡರ ಹುಟ್ಟುಹಬ್ಬದ ಶುಭ ಹಾರೈಸಿದರು.
ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮಿಗಳು ಮಾತನಾಡಿ ವ್ಯಕ್ತಿ ತಾನು ಬದುಕುವ ಜತೆಗೆ ತನ್ನಂತೆ ಬೇರೆಯವರು ಬದುಕಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವವರು ನಿಜವಾದ ಸಮಾಜ ಸೇವಕರು ಅಲ್ಲದೆ ನಾವು ಮಾಡಿದ ಕೆಲಸವನ್ನು ನಾವು ಮಾತನಾಡಬಾರದು ಜನರ ಮಾತಿನಲ್ಲಿ ಬರಬೇಕು ಈ ವಿಶ್ವದಲ್ಲಿ ಯಾರ ಬದುಕು ಶಾಶ್ವತವಲ್ಲ ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿದ್ದು ದೊಡ್ಡ ಸ್ವಾಮಿಗೌಡರು ಕ್ಷೇತ್ರದಲ್ಲಿ ಜನಸಾಮಾನ್ಯರ ದುನಿಯಾಗಿದ್ದು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಹಾಗೂ ಹೆಚ್ಚಿನ ಅಧಿಕಾರ ಸ್ಥಾನ ಸಿಗಲಿ ಎಂದು ಹಾರೈಸಿದರು.
ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಅಯೋಜಿಸಲಾಗಿದ್ದು 100ಕ್ಕೂ ಹೆಚ್ಚು ಪ್ರತಿಷ್ಠಿತ ಐಟಿಬಿಟಿ ಕಂಪನಿಗಳು, ಕಾರ್ಖಾನೆಗಳು, ಉದ್ಯಮಗಳು, ಕೌಶಲ್ಯ ತರಬೇತಿ ಕೇಂದ್ರಗಳು ಹಾಗೂ ಉದ್ಯೋಗ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಾವಿರಾರು ಉದ್ಯೋಗಾಂಕ್ಷಿಗಳು ನೌಕರಿ ಪಡೆದರೆ.
ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅ್ರ ಅನುಕೂಲ ಪಡೆದರು. ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಸಂಘಟನೆಗಳ ಪದಾಧಿಕಾರಿಗಳು ದೊಡ್ಡ ಸ್ವಾಮೆಗೌಡರ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು. ಶಾಸಕ ಡಿ.ರವಿಶಂಕರ್, ಪತ್ನಿ ಸುನೀತಾ ಅವರು ಕಾರ್ಯಕ್ರಮದ ಯಶಸ್ವಿಗೆ ನಿರಂತರವಾಗಿ ಶ್ರಮಿಸಿದರು.
ಕಾರ್ಯಕ್ರಮದಲ್ಲಿ ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಸರಗೂರು ಪಟ್ಟದಮಠದ ಶ್ರೀ ಮೃತ್ಯುಂಜಯ ಸ್ವಾಮಿ, ಪಿರಿಯಾಪಟ್ಟಣದ ಕಗ್ಗುಂಡಿ ಶ್ರೀ ಗುರು ಅರಳಯ್ಯನವರ ಮಠದ ಶ್ರೀ ರುದ್ರಮುನಿ ಸ್ವಾಮಿಗಳು, ಲಾಲನಹಳ್ಳಿ ಗುರು ಮಲ್ಲೇಶ್ವರ ದಾಸೋಹ ಮಠದ ಸರಣೆ ಜಯದೇವಿ ತಾಯಿ, ಕಲ್ಯಾಣಪುರದ ಕಲ್ಯಾಣ ಬಸವೇಶ್ವರ ಮಠದ ಶರಣೆ ಚಿನ್ಮಯಿ ತಾಯಿ, ಮಾರಗೌಡನಹಳ್ಳಿ ಮಠದ ಶಂಭುಲಿಂಗಸ್ವಾಮಿಜೀ, ಶಾಸಕ ಹರೀಶ್ ಗೌಡ,. ಪುರಸಭೆ ಅಧ್ಯಕ್ಷ ಶಿವುನಾಯಕ್,
ಕೆಆರ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಗಂಧನಹಳ್ಳಿ ಹೇಮಂತ್, ರಾಷ್ಟ್ರೀಯ ಅಂಹಿದ ಸಂಘಟನೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಗರುಡಗಂಬ ಮಂಜು, ಕಾಂಗ್ರೆಸ್ ಮುಖಂಡರಾದ ಹೊಸೂರು ಡೈರಿ ಮಾದು, ಎಸ್.ಜಿ.ಇಬ್ರಾಹಿಂ ಷರೀಫ್, ದೆಗ್ಗನಹಳ್ಳಿ ಅನಂದ್, ದಿನೇಶ್, ಕೆ.ಪಿ.ಜಗದೀಶ್, ಚಿಕ್ಕಕೊಪ್ಪಲು ನವೀನ, ಕೋಳಿ ಮನು, ಸಿ.ಎಸ್. ಗಿರೀಶ್ ,ಸಿಕೆಅರ್ ಮನು, ಸರಿತಾ ಜವರಪ್ಪ, ಉಷಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಾಗೂ ತಾಲೂಕಿನ ಪ್ರಭಾವಿ ರಾಜಕೀಯ ಮುಖಂಡರಾದ ಕೆಸ್ತೂರು ಕೊಪ್ಪಲು ದೊಡ್ಡಸ್ವಾಮೇಗೌಡರ 75 ನೇ ಜನ್ಮ ದಿನೋತ್ಸವದ ಅಂಗವಾಗಿ ಕೃಷ್ಣರಾಜ ನಗರ ಪಟ್ಟಣದ ರೇಡಿಯೋ ಮೈದಾನದಲ್ಲಿ ಅವರ ಅಭಿಮಾನಿಗಳು ಏರ್ಪಡಿಸಿದ್ದ ಉದ್ಯೋಗಮೇಳದಲ್ಲಿ ವಿವಿಧ ಕಂಪೆನಿಗಳು ಭಾಗವಹಿಸಿದ್ದು ಸುಮಾರು 2750 ಮಂದಿ ನೋಂದಾಯಿಸಿಕೊಂಡು, ಅವರಲ್ಲಿ 680 ಮಂದಿಗೆ ಉದ್ಯೋಗ ಸಿಕ್ಕಿರುವುದು ಅಭಿನಂದನಾರ್ಹ ಸಂಗತಿ. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಾಗಿದ್ದು ಅವರೆಲ್ಲರೂ ಇಂದು ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿರುವುದು ನಿಜಕ್ಕೂ ಮೆಚ್ಚುವಂಥ ಕೆಲಸ. ರಾಜಕೀಯ ಕ್ಷೇತ್ರದಲ್ಲಿರುವ ಪ್ರತಿಷ್ಟಿತ ವ್ಯಕ್ತಿಗಳು ಹುಟ್ಟು ಹಬ್ಬಕ್ಕೆ ದುಂದುವೆಚ್ಚ ಮಾಡುವ ಬದಲು ಇಂತಹ ಸಾರ್ಥಕವಾದ ಕೆಲಸ ಮಾಡಬೇಕು
-ಪ್ರಾಧ್ಯಾಪಕ ಪ್ರೊ. ಚಿಕ್ಕಕೊಪ್ಪಲು ಸಿ. ಡಿ.ಪರಶುರಾಮ್
ಮೈಸೂರು ಯುವರಾಜ ಕಾಲೇಜು