Thursday, March 12, 2026
Google search engine

Homeಸ್ಥಳೀಯಜಾಕಿ‌ ಸಂಸ್ಥೆಯಿಂದ ಅಂಬುಲೆನ್ಸ್ ವಾಹನ ಹಸ್ತಾಂತರ

ಜಾಕಿ‌ ಸಂಸ್ಥೆಯಿಂದ ಅಂಬುಲೆನ್ಸ್ ವಾಹನ ಹಸ್ತಾಂತರ

ಮೈಸೂರು: ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕಕ್ಕೆ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ‘ಜಾಕಿ’ ಸಂಸ್ಥೆ ವತಿಯಿಂದ ನೂತನ ಅಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.

ಸಿ.ಎಸ್.ಆರ್ ಅನುದಾನದಡಿಯಲ್ಲಿ ಅಂಬುಲೆನ್ಸ್ ವಾಹನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ವಾಹನದ ಕೀಯನ್ನು ಹಸ್ತಾಂತರ ಮಾಡಿದರು.ಈ ಅಂಬುಲೆನ್ಸ್ ವಾಹನವು ಹೆಚ್.ಐ.ವಿ/ಏಡ್ಸ್ ಸಂಶಯಾತ್ಮಕ ಪ್ರಕರಣಗಳ ತುರ್ತು ಚಿಕಿತ್ಸೆಗೆ‌ ಹಾಗೂ ಆಪ್ತ ಸಮಾಲೋಚನೆ ಮತ್ತು ತಪಾಸಣೆಗೆ ಸಹಕಾರಿಯಾಗಲಿದೆ. ಇದರಿಂದಾಗಿ ಸೂಕ್ತ ಸಮಯದಲ್ಲಿ ಆಪ್ತ ಸಮಾಲೋಚನೆ ಮತ್ತು ಆರೋಗ್ಯ ಸೇವೆ ನೀಡುವುದರಿಂದ ದೂರದ ಊರುಗಳಿಗೂ ಹತ್ತಿರದ ಆರೈಕೆ ಸಾಧ್ಯವಾಗಲಿದೆ.

ಇದೇ ವೇಳೆ ಘಟಕದ ಮುಖ್ಯಸ್ಥ ಶ್ರೀ ಬಾಬುರಾವ್ ಹಾಗೂ ಸಿ.ಎಸ್.ಆರ್ ಕಾರ್ಯಚಟುವಟಿಕೆ ಮುಖ್ಯಸ್ಥರಾದ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಅರವಿಂದ್, ಡಾ. ಮಹಮ್ಮದ್ ಸಿರಾಜ್ ಅಹಮ್ಮದ್ , ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular