Sunday, October 12, 2025
Google search engine

Homeರಾಜ್ಯಕೆಮ್ಮಿನ ಸಿರಪ್ ಭಯ ಬೇಡ: ಯಾವುದೇ ನೆಗೆಟಿವ್ ಅಂಶವಿಲ್ಲ: ಸಚಿವ ದಿನೇಶ್ ಗುಂಡೂರಾವ್

ಕೆಮ್ಮಿನ ಸಿರಪ್ ಭಯ ಬೇಡ: ಯಾವುದೇ ನೆಗೆಟಿವ್ ಅಂಶವಿಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಮಧ್ಯಪ್ರದೇಶ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ, ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದುವರೆಗೂ 390ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಸ್ಯಾಂಪಲ್ ತಪಾಸಣೆ ನಡೆಸಿದ್ದು, ಅವುಗಳಲ್ಲಿ ಯಾವುದೇ ರೀತಿಯಾದ ನೆಗೆಟಿವ್ ಅಂಶ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಮ್ಮಿನ ಸಿರಪ್ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, 390 ಸ್ಯಾಂಪಲ್ ತಪಾಸಣೆ ಮಾಡಿಸುತ್ತಿದ್ದೇವೆ. ವರದಿಯ ಯಾವುದರಲ್ಲೂ ನೆಗೆಟಿವ್ ಬಂದಿಲ್ಲ. ಎಲ್ಲಾ ಡ್ರಗ್ ಮ್ಯಾನಿಫ್ಯಾಕ್ಟರ್​ಗಳ ಮಾನದಂಡವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗ್ತಿದೆ. ಅವ್ಯವಸ್ಥೆ ಇರಬಾರದು, ನಿಯಮ‌ ಪ್ರಕಾರ ಔಷಧ ತಯಾರು ಮಾಡಬೇಕು. ಅದನ್ನೆಲ್ಲಾ ಪರಿಶೀಲನೆ ಮಾಡಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular