Tuesday, November 4, 2025
Google search engine

Homeರಾಜ್ಯಸುದ್ದಿಜಾಲಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಡಾ.ಡಿ.ನಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂದನ್ ಆಯ್ಕೆ

ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಡಾ.ಡಿ.ನಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂದನ್ ಆಯ್ಕೆ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಡಾ.ಡಿ.ನಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ರೈತ ಮುಖಂಡ ಮಧುಸೂದನ್ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಮಂದಿರದ ಆವರಣದಲ್ಲಿ ನಡೆದ ಶ್ರೀ ಸಾಯಿಬಾಬಾ ಸಮಿತಿಯ ಸರ್ವ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಡಾ.ಡಿ.ನಟರಾಜ್ ಮಾತನಾಡಿ ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸುವ ಜೊತೆಗೆ ದೇವ ಮಂದಿರವನ್ನಾಗಿ ಮಾಡುವುದರ ಜೊತೆಗೆ ಆರೋಗ್ಯ ಮಂದಿರವಾಗಿ ಪರಿವರ್ತನೆ ಆಗಬೇಕು ಆಗ ಮಾತ್ರ ದೇವರ ಕೃಪೆ ಸರ್ವರಿಗೂ ದೊರೆಯಲಿದೆ ಎಂದರು.

ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಮನುಷ್ಯರು ಹಲವಾರು ರೋಗಗಳಿಗೆ ಬಳಲುತ್ತಿದ್ದು ಪ್ರತಿಯೊಬ್ಬ ಮನುಷ್ಯರು ದಿನದ ಒಂದು ಗಂಟೆ ತಮ್ಮ ಆರೋಗ್ಯದ ಕಾಳಜಿ ವಹಿಸಲು ದೇವಾಲಯಗಳಿಗೆ ಹೋಗುವಂತೆ ಕಿವಿ ಮಾತು ಹೇಳಿದರು.

ಇವಕ್ಕೂ ಮೊದಲು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕಾರ್ಯದರ್ಶಿ ನಾರಾಯಣ್, ಸಂಘಟನಾ ಕಾರ್ಯದರ್ಶಿ ಕಣ್ಣನ್, ಪತ್ರಿಕಾ ಕಾರ್ಯದರ್ಶಿ ಯೋಗಾನಂದ್, ಗೌರವ ಸಲಹೆಗಾರ ಎಂ ಜೆ ರಮೇಶ್, ಖಜಾಂಚಿ ಸುದೇವ್ ಅವರುಗಳನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಯಿತು.

ಸಾಯಿಬಾಬಾ ಭಕ್ತರಾದ ಅಡುಗೆ ಕುಮಾರ್, ಹಿರಿಯರಾದ ಪಾರ್ವತಮ್ಮ, ವಕೀಲ ವಸಂತ್ ಕುಮಾರ್, ಉಪ್ಪಾರ ಸಮಾಜ ಮಾಜಿ ಅಧ್ಯಕ್ಷೆ ವಸಂತಮ್ಮ ಪುಟ್ಟಸ್ವಾಮಿ, ಮುಖಂಡರಾದ ‌ಎನ್. ಯೋಗೇಶ್ ಕುಮಾರ್, ಸತ್ಯನಾರಾಯಣ್, ಕಲಾವತಿಬಾಯಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜೆ ರಮೇಶ್ ಹಾಗೂ ಭಜನೆ ಮಂಡಳಿ ವರುಣ್ ಮತ್ತು ಬಡಾವಣೆಯ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular