ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಯನ್ನು ಶ್ರೀ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಶನಿವಾರ ಪರಿಶೀಲಿಸಿದರು.
ವಿಜಯ್ ಅವರ ಹುಟ್ಟೂರು ತಾಲ್ಲೂಕಿನ ಹರದನಹಳ್ಳಿಯಲ್ಲಿ ನಡೆಯುತ್ತಿರುವ ಜನ್ಮದಿನೋತ್ಸವ ಕಾರ್ಯಕ್ರಮದ ಪೆಂಡಾಲ್, ಪಾರ್ಕಿಂಗ್, ಊಟದ ಸ್ಥಳ, ವೇದಿಕೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಮಾರಂಭದಲ್ಲಿ ಸುಮಾರು ಹತ್ತರಿಂದ ಹದಿನೈದು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು ಬರುವಂತಹ ಎಲ್ಲರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಮುಖಂಡರಾದ ಮಿರ್ಲೆ ರಾಜೀವ್, ಎಲ್ಐಸಿ ನಿಂಗಪ್ಪ, ವೆಂಕಟೇಶ್, ಕೆ.ಟಿ.ಮೋಹನ್ ಕುಮಾರ್, ಹೆಚ್.ಜೆ.ಗೋಪಾಲ್, ಪೊಲೀಸ್ ಬಸವೇಗೌಡ, ತಿಮ್ಮೇಗೌಡ, ಡಾಲ್ಪಿ, ಎಸ್. ಆರ್.ರವಿಕುಮಾರ, ಲಕ್ಷ್ಮೀಶ ಸೇರಿದಂತೆ ಹಲವರು ಇದ್ದರು.