ಪಿರಿಯಾಪಟ್ಟಣ: ಗ್ರಂಥಾಲಯಗಳ ಅಭಿವೃದ್ಧಿಗೆ ಡಾ.ಎಸ್.ಆರ್ ರಂಗನಾಥ್ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಶಿಕ್ಷಕ ಎನ್.ಆರ್ ಕಾಂತರಾಜು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ವಿಶ್ವ ಗ್ರಂಥಪಾಲಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಡಿಜಿಟಲ್ ಯುಗದಲ್ಲಿಯೂ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿ ಗ್ರಂಥಾಲಯಗಳ ಉಳಿವಿಗೆ ಶ್ರಮಿಸಿದ ಕೀರ್ತಿ ಡಾ.ಎಸ್.ಆರ್ ರಂಗನಾಥ್ ಅವರಿಗೆ ಸಲ್ಲುತ್ತದೆ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆ ಜತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಈ ಸಂದರ್ಭ ಮುಖಂಡರಾದ ಬೆಕ್ಕರೆ ನಂಜಪ್ಪ, ಗ್ರಂಥಾಲಯ ಮೇಲ್ವಿಚಾರಕಿ ರೇವತಿ, ಸಿಬ್ಬಂದಿ ಶ್ರೀನಿವಾಸ್ ಮತ್ತು ಓದುಗರು ಇದ್ದರು.