Friday, September 12, 2025
Google search engine

Homeರಾಜ್ಯಸುದ್ದಿಜಾಲಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ: ಕನ್ನಡಿಗರ ಕನಸು ನನಸು: ಸುರೇಶ್ ಎನ್ ಋಗ್ವೇದಿ

ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ: ಕನ್ನಡಿಗರ ಕನಸು ನನಸು: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿರುವುದು ಕನ್ನಡಿಗರಿಗೆ ಬಹುದಿನದ ಕನಸು ನನಸಾಗಿದೆ. ಕರ್ನಾಟಕ ಸರ್ಕಾರಕ್ಕೆ ವಿಶೇಷವಾಗಿ ಧನ್ಯವಾದಗಳು ಹಾಗು ಅಭಿನಂದನೆಗಳನ್ನು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾದ ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.

ಡಾ.ವಿಷ್ಣುವರ್ಧನ್ ಕನ್ನಡದ ಹೆಮ್ಮೆಯ ಹೃದಯವಂತ ನಟ.200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಂಸ್ಕೃತಿ ,ಪರಂಪರೆ, ಐತಿಹಾಸಿಕ ,ಸಾಮಾಜಿಕ ಹಾಗೂ ವಿವಿಧ ರೀತಿಯ ಶೈಲಿಯ ನಾಯಕ ನಟನಾಗಿ ಕನ್ನಡಿಗರ ಮನದಲ್ಲಿ ಸದಾ ಕಾಲ ಹಸಿರಾಗಿ ಉಳಿದಿರುವ ವಿಷ್ಣುವರ್ಧನ್ ರವರಿಗೆ ಕರ್ನಾಟಕದ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಅತ್ಯಂತ ಸಮಯೋಚಿತವಾಗಿದೆ. ವಿಷ್ಣುವರ್ಧನ್ ರವರ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕೋಟ್ಯಾಂತರ ಕನ್ನಡಿಗ ಅಭಿಮಾನಿಗಳಿಗೆ ಪ್ರಶಸ್ತಿ ಸಂದಿರುವುದು ಬಹಳ ಸಂತೋಷವನ್ನು ತಂದಿದೆ .ದೃಢ ನಿರ್ಧಾರವನ್ನು ಕೈಗೊಂಡ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ವಿಷ್ಣುವರ್ಧನ್ ಒಬ್ಬ ಮಾನವೀಯ ಮೌಲ್ಯದ ಶ್ರೇಷ್ಠ ನಟ. ವಿಷ್ಣುವರ್ಧನ್ ರವರ ಚಲನಚಿತ್ರಗಳು ಕೋಟ್ಯಾಂತರ ಜನರ ಮನಸ್ಸಿಗೆ ನೆಮ್ಮದಿಯನ್ನು ಹಾಗೂ ಒಳ್ಳೆಯ ಸಂದೇಶವನ್ನು ನೀಡಿರುವ ಚಿತ್ರಗಳಾಗಿವೆ ಎಂದು ಋಗ್ವೇದಿ ಹರ್ಷ ವ್ಯಕ್ತಪಡಿಸಿ , ಬಹುಭಾಷಾ ನಟಿ ಬಿ ಸರೋಜಾ ದೇವಿಯವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಅಭಿನಂದನೆಯನ್ನು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular