ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರು ಯಾವುದೇ ಬೆಳೆಬೆಳೆಯುವಾಗ ಕೃಷಿ ಅಧಿಕಾರಿಗಳು ಮತ್ತು ಪ್ರಗತಿ ಪರ ರೈತರ ಮಾರ್ಗದರ್ಶನ ಪಡೆದರೆ ಖಡಿಮೆ ಖರ್ಚಿನಲ್ಲಿ ಉತ್ತಮ ಬೆಳೆಯನ್ನು ಪಡೆದು ಅಧಿಕ ಲಾಭ ಪಡೆಯ ಬಹುದು ಎಂದು ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ಎಸ್.ಎಂ.ನೂತನ್ ಗೌಡ ಹೇಳಿದರು.
ಸಾಲೇಕೊಪ್ಪಲು ಗ್ರಾಮದ ಎಸ್.ಜಿ.ಕುಮಾರ್ ಮತ್ತು ಅಭಿಅಕಾಶ್ ಅವರ ಜಮೀನಲ್ಲಿ ಹಮ್ಮಿಕೊಳ್ಳಲಾಗಿದ್ದ ವೆಲ್ ಕಮ್ ಕ್ರಾಪ್ ಸೈನ್ಸ್ ಕಂಪನಿಯ ಇಂಡಿಕಾ ಹೈ ಬ್ರಿಡ್ ಹೂ ಕೋಸು ತಳಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ಖರ್ಚಿನಲ್ಲಿ ಬೆಳೆಯ ಬಹುದಾದ ಹೂ ಕೋಸ್ ಬೆಳೆಯನ್ನು ಬೆಳೆಯುವಾಗ ರೈತರು ಕೃಷಿ ಅಧಿಕಾರಿಗಳು ಶಿಪಾರಸ್ಸು ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಂಡು ಸೂಚಿಸಿದ ರಸಗೊಬ್ಬರ ಔಷದಿಗಳನ್ನು ಬಳಸಿಕೊಂಡು ಹನಿ ನೀರಾವರಿ ಮೂಲಕ ಬೆಳೆ ಬೆಳೆದರೆ ರೋಗ ರುಜಿನದಿಂದ ಮುಕ್ತಿಯಾಗಿ ಹೆಚ್ಚಿನ ಲಾಭವನ್ನು ಪಡೆಯ ಬಹುದಾಗಿದೆ ಎಂದರು.
ಕಂಪನಿಯ ವಲಯ ಮಾರಾಟ ವ್ಯವಸ್ಥಾಪಕ ಮನೋಜ್ ಕುಮಾರ್ ಕುಲಕರ್ಣಿ ಮಾತನಾಡಿ ನಮ್ಮ ಕಂಪನಿಯಲ್ಲಿ ಇಂಡಿಕಾ ಹೂ ಕೋಸ್, ಟೊಮ್ಯಾಟದ ವಾಲಿ ತಳಿ,ಕುಂಬಳಿದಲ್ಲಿ ಜಾವ, ಕಾಳಿ ತಳಿಯನ್ನು ಬಹಳ ಪ್ರಸಿದ್ದಿಯನ್ನು ಪಡೆದಿದ್ದು ರೈತರು ಈ ತಳಿಯನ್ನು ಬೆಳೆಯುವ ಮೂಲಕ ನಮ್ಮ ಕಂಪನಿಯನ್ನು ಬೆಂಬಲಿಸುವಂತೆ ಮನವಿ ಮಾಡಿ ಈ ಬೆಳೆಯ ವಿಧಾನ ಗೊಬ್ಬರ , ಔಷದ ಉಪಚಾರದ ಜತಗೆ ಯಾವ ತಿಂಗಳಿನಲ್ಲಿ ಬೆಳೆಯುವುದು ಸೂಕ್ತ, ಎಂದು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಪ್ಪೆ ಗ್ರಾ.ಪಂ.ಸದಸ್ಯ ಸಿ.ಬಿ.ಧರ್ಮ, ಹೊಸೂರು ಸೊಸೈಟಿ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಡೈರಿ ಅಧ್ಯಕ್ಷ ಮೋಹನ್, ರೈತರಾದ ಎಸ್.ಪಿ.ಜಗದೀಶ್, ರಾಜಣ್ಣ, ಭರತ್, ಬಾಲಕೃಷ್ಣ, ಗುಂಡು ನಾಗೇಂದ್ರ, ಚೇತನ್, ರಾಜೇಗೌಡ, ಗವಿರಂಗೇಗೌಡ, ಸೋಮಶೇಖರ್, ಎಸ್.ಪಿ.ಹರೀಶ್, ಶ್ರೀನಿವಾಸ್, ಟೈಲರ್ ಚೆಲುವರಾಜ್,ಕಂಪನಿಯ ಸುಗ್ಗಿ ಅಗ್ರೋ ಸೆಂಟರ್ ನ ಮಾರಾಟಗಾರ ಅಂಜನ್ ಸುಗ್ಗಿ, ಸಂಜನ್ ಸುಗ್ಗಿ, ಮೈಸೂರು ವಿಭಾಗದ ಪ್ರತಿನಿಧಿ ಸಂತೋಷ್ ಗೌಡ, ಸಿದ್ದರಾಮೇಶ್ವರ ಹೈ ಟೆಕ್ ನರ್ಸರಿಯ ರಾಮೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.



