Saturday, March 28, 2026
Google search engine

Homeಅಪರಾಧಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ ಕೇಸ್

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ ಕೇಸ್

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮ ಬಾಹಿರವಾಗಿ ಡ್ರೋನ್ ಹಾರಿಸಿದ ಹಿನ್ನಲೆ ನಗರದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಾಂಟರ್‍ಲಸ್ಟ್ ಎಂಬ ಯೂಟ್ಯೂಬರ್ ಏರ್ ಪೋರ್ಟ್‍ನ ಟರ್ಮಿನಲ್ 1ರ ಮುಂಭಾಗದಿಂದ ಬೆಂಗಳೂರಿನ ಯಲಹಂಕ ಮಾರ್ಗವಾಗಿ ಏರ್ ಪೋರ್ಸ್‍ವರೆಗೂ ಡ್ರೋನ್ ಹಾರಿಸಲಾಗಿದೆ. ಸುಮಾರು 7-8 ನಿಮಿಷಗಳ ಕಾಲ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಮೆಟ್ರೋ ಕಾಮಗಾರಿಯುದ್ದಕ್ಕೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರೆಡ್ ಝೋನ್ ವ್ಯಾಪ್ತಿಗೆ ಓಳಪಟ್ಟಿದ್ದು. ನೋ ಫ್ಲೈಯಿಂಗ್ ಝೋನ್‌ನಲ್ಲಿ ಡ್ರೋನ್ ಹಾರಾಟ ಮಾಡಿರುವ ಕಾರಣ ಯೂಟ್ಯೂಬರ್ ವಿರುದ್ಧ ಸಿಐಎಸ್‍ಎಫ್‌ನ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಏರ್ ಕ್ರಾಪ್ಟ್ ಆಕ್ಟ್, 1943 (ಯು-ಎಸ್-10(1ಎ) ಹಾಗೂ ಬಿಎನ್‍ಎಸ್ ಯು-ಎಸ್-125 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

RELATED ARTICLES
- Advertisment -
Google search engine

Most Popular