Saturday, October 4, 2025
Google search engine

Homeಸಿನಿಮಾಬಿಗ್​ಬಾಸ್​ನಲ್ಲಿ ಗೆದ್ದ ಎಲೆಕ್ಟ್ರಿಕ್ ಬೈಕ್ ದಾನ ಮಾಡಿದ ಡ್ರೋನ್ ಪ್ರತಾಪ್

ಬಿಗ್​ಬಾಸ್​ನಲ್ಲಿ ಗೆದ್ದ ಎಲೆಕ್ಟ್ರಿಕ್ ಬೈಕ್ ದಾನ ಮಾಡಿದ ಡ್ರೋನ್ ಪ್ರತಾಪ್

ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆವರೆಗೂ ಬಂದು ರನ್ನರ್ ಅಪ್ ಆದ ಡ್ರೋನ್ ಪ್ರತಾಪ್, ಬಿಗ್​ಬಾಸ್ ವೇದಿಕೆ ಮೇಲೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಬಿಗ್​ಬಾಸ್​ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್ ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ ಇನ್ನಿತರೆಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಅಂತೆಯೇ ಬಿಗ್​ಬಾಸ್​ ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ಬಹುಮಾನದ ಮೊತ್ತ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುವಕನೊಬ್ಬನಿಗೆ ಬೈಕ್ ಅನ್ನು ನೀಡುತ್ತಿರುವ ಚಿತ್ರ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ‘ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದು ನನಗೆ ತುಂಬಾ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

ಡ್ರೋನ್ ಪ್ರತಾಪ್​ರ ಈ ಕಾರ್ಯಕ್ಕೆ ಮೆಚ್ಚಿ ಹಲವರು ಕಮೆಂಟ್ ಮಾಡಿದ್ದಾರೆ. ‘ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ’, ‘ನಿಮಗೆ ಮತ ಹಾಕಿದ್ದಕ್ಕೂ ಸಾರ್ಥವಾಯ್ತು’, ‘ನಿಮ್ಮ ಈ ಗುಣವೇ ನಿಮ್ಮನ್ನು ಬಿಗ್​ಬಾಸ್ ಫಿನಾಲೆ ವರೆಗೂ ಕರೆತಂದಿತು’ ಇನ್ನೂ ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ. ಪ್ರತಾಪ್​ರ ಈ ಕಾರ್ಯಕ್ಕೆ ಅತೀವ ಮೆಚ್ಚುಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular