Friday, May 23, 2025
Google search engine

Homeಅಪರಾಧಮಾದಕ ವಸ್ತು ಮಾರಾಟ: ಆರೋಪಿ ಬಂಧನ

ಮಾದಕ ವಸ್ತು ಮಾರಾಟ: ಆರೋಪಿ ಬಂಧನ

ಮೈಸೂರು : ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ 50,000 ಮೂಲ್ಯದ 10.25 ಗ್ರಾಂ ಎಂ.ಡಿ.ಎಂ.ಎ ಅನ್ನು ವಶಕ್ಕೆ ಪಡೆದಿದ್ದಾರೆ.

ನಗರ ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಪಾಲ್ ಆಸ್ಪತ್ರೆಯ ಜೋಡಿ ಬಸವೇಶ್ವರ ಹೋಟೆಲ್ ನ ಪುಟ್ಪಾತ್ ಬಳಿ ಆರೋಪಿಯನ್ನು ವಶಪಡಿಸಿದ್ದಾರೆ.

ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಆರೋಪಿಯ ಮೇಲೆ ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಘಟಕದ ಇನ್ ಸ್ಪೆಕ್ಟರ್ , ಎಸ್ ಐ ಗಳಾದ ಮಾರುತಿ ಅಂತರಗಟ್ಟಿ, ಕಿರಣ ಹಂಪಿ ಹೊಳಿ ಮತ್ತು ಸಿಬ್ಬಂದಿಗಳಾದ ರಾಮಸ್ವಾಮಿ, ಸಲೀಂ ಪಾಷಾ, ಟಿ ಪ್ರಕಾಶ್, ಚಂದ್ರಶೇಖರ, ಮೋಹನ ರಾಧ್ಯಾ, ಶಿವಣ್ಣ, ನರಸಿಂಹರಾಜು ಮತ್ತು ಗೋವಿಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular