Sunday, February 15, 2026
Google search engine

Homeಅಪರಾಧಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ

ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ

ಮಂಗಳೂರು (ದಕ್ಷಿಣ ಕನ್ನಡ): ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ವ್ಯಕ್ತಿಯೊಬ್ಬರು ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಗಂಪದಕೋಡಿಯ ಮರುವದಡಿ ಎಂಬಲ್ಲಿ ನಡೆದಿದೆ.

ಉಷಾ (40), ಹಲ್ಲೆಗೊಳಗಾದ ಮಹಿಳೆ. ವಸಂತ ಪೂಜಾರಿ (50),ಹಲ್ಲೆ ನಡೆಸಿದ ಆರೋಪಿ. ಹಲ್ಲೆ ನಡೆಸಿದ ವಸಂತ ಪೂಜಾರಿ ಎಂಬವರು ಉಷಾರವರಿಗೆ ಚಿಕ್ಕಪ್ಪ ಆಗಿದ್ದು ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಗೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಗಾಯಾಳು ಉಷಾ ಅವರು ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ವಸಂತ ಪೂಜಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.

RELATED ARTICLES
- Advertisment -
Google search engine

Most Popular