ರಾಮನಗರ: ಕರ್ನಾಟಕದ ಸಾಂಸ್ಕೃತಿಕಚರಿತ್ರೆಯಲ್ಲಿಒಂದು ಹೊಸ ಮೈಲಿಗಲ್ಲು ನಾಡೋಜ ಎಚ್.ಎಲ್.ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ. ದಕ್ಷ ಅಧಿಕಾರಿಗಳಾಗಿ, ಸೃಜನಶೀಲ ಲೇಖಕರಾಗಿತಮ್ಮ ಮಹತ್ವಾಕಾಂಕ್ಷೆಯ ಜಾನಪದ ಕಲಾ ಕೇಂದ್ರ ಸ್ಥಾಪನೆ ಮಾಡಿರುವುದು ನಾಡಿಗೆ, ರಾಮನಗರ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ೧೫ ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವಜಾನಪದ ಲೋಕವು ಸಂಪೂರ್ಣ ಗ್ರಾಮೀಣ ಪರಿಸರವನ್ನು ಪ್ರತಿಬಿಂಬಿಸುವ ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಲೋಕ. ನಾಗೇಗೌಡರಕಠಿಣ ಪರಿಶ್ರಮ, ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸಿ ಸಂರಕ್ಷಿಸಬೇಕೆನ್ನುವ ಮಹದಾಸೆಯಿಂದ ೧೯೯೪ ಮಾರ್ಚ್ ೧೨ ರಂದು ಆರಂಭವಾಯಿತು.
ಕಳೆದ ೨೮ ವರ್ಷಗಳಿಂದ ಜಾನಪದ ಲೋಕವು ದೇಶದಅತ್ಯಂತ ಮಹತ್ವದ ಸಾಂಸ್ಕೃತಿP ಕೇಂದ್ರವಾಗಿ ಮಹತ್ತರ ಕಾರ್ಯಗಳನ್ನು ಮಾಡುತ್ತಿದೆ. ಅದರಲ್ಲಿ ಪ್ರತಿ ವರ್ಷ ನವರಾತ್ರಿದಸರಾ ಸಂದರ್ಭದಲ್ಲಿ ನಡೆಯುವ ಗೊಂಬೆಗಳ ಪ್ರದರ್ಶನ ವಿಶಿಷ್ಟ ಲೋಕವನ್ನು ತೆರೆದುಕೊಳ್ಳುತ್ತದೆ.
ದಸರಾ ಬೊಂಬೆಗಳ ವಿಶೇಷ: ೧೯೯೬ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮೊದಲ ಬಾರಿಗೆ ಬೊಂಬೆಗಳ ಪ್ರದರ್ಶನವನ್ನು ಪ್ರಾರಂಭಿಸಿತು.ಪ್ರತಿ ವರ್ಷದಂತೆ ಈ ವರ್ಷವೂಗೊಂಬೆ ಪ್ರದರ್ಶನವನ್ನು ನವರಾತ್ರಿಯ ಮೊದಲ ದಿನಪ್ರಾರಂಭಿಸಲಾಗಿದೆ. ಈ ವರ್ಷದ ಬೊಂಬೆಗಳ ಪ್ರದರ್ಶನದಲ್ಲಿ ವಿಶೇಷವಾಗಿ ಭಾರತದ ಸಂವಿಧಾನರಚನೆಯಾಗಿ (ನವಂಬರ್ ೨೬ ೧೯೪೯) ೭೫ ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿಸರ್ವಜನಾಂಗದ ಶಾಂತಿಯತೋಟ ಎಂಬ ಶೀರ್ಷಿಕೆಯಡಿ ಸಂವಿಧಾನದ ಆಶಯದಂತೆ ಬುದ್ಧ, ಬಸವ,ಜೀಸಸ್, ಇಸ್ಲಾಂಗಾಂಧಿ, ಅಂಬೇಡ್ಕರ್, ಧರ್ಮದಕುರಿತ ಬೊಂಬೆಗಳು ಸಂವಿಧಾನ ರಚನೆಯಲ್ಲಿ ವಿವಿಧ ಸಮಿತಿಗಳಲ್ಲಿ ಕೆಲಸ ನಿರ್ವಹಿಸಿದ ಮಹಿಳೆಯರ ೧೫ ಗೊಂಬೆಗಳ ಸಾಲು ವಿಶೇಷವಾಗಿದೆ.

ಉಳಿದಂತೆ ಶಿವ-ಪಾರ್ವತಿ, ರಾಜ-ರಾಣಿ, ಪಟ್ಟದ ಗೊಂಬೆಗಳು, ಮೈಸೂರು ಅರಮನೆ, ಶ್ರೀಮನ್‌ನಾರಾಯಣ ಮದುವೆ ಸಂಭ್ರಮ, ಗೋವರ್ಧನಗಿರಿಯಲ್ಲಿ ಶ್ರೀಕೃಷ್ಣ, ದಶಾವತಾರ, ಮದುವೆ ದಿಬ್ಬಣ, ಉತ್ತರ ಭಾರತದ ವಿವಿಧ ಕಲಾ ಪ್ರಕಾರಗಳ ಕಲಾವಿದರು, ಬುಡಕಟ್ಟು ವಾದ್ಯಗಾರರು, ದೇಶ-ವಿದೇಶಗಳ ಜನರು, ಸ್ವಾತಂತ್ರ್ಯ ಹೋರಟಗಾರರು, ದಸರಾದಲ್ಲಿಚಾಮುಂಡೇಶ್ವರಿ ಮೆರವಣಿಗೆ, ಹಣ್ಣು-ತರಕಾರಿಗಳು, ಪ್ರಾಣಿ-ಪಕ್ಷಿಗಳು, ಮಕ್ಕಳ ಅಟಿಕೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ದಸರಾ ಬೊಂಬೆಗಳ ಉದ್ಘಾಟನೆ: ದಸರಾಬೊಂಬೆ ಪ್ರದರ್ಶನವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರಾಜ್ಯ ಪರಿಸರ ಪರಿಚಾಲಕರಾದ ಮುಕುಂದರಾವ್ ಲೋಕಂಡೆ,ಡಾ. ಎಸ್.ಕೆ.ಖರಿಂಖಾನ್ ಮೊಮ್ಮಗತನ್ವೀರ್‌ಅಹಮದ್,ಕರ್ನಾಟಕ ಜಾನಪದ ಪರಿಷತ್ತಿನಅಧ್ಯಕ್ಷರಾದ ಪ್ರೊ.ಹಿ.ಶಿ ರಾಮಚಂದ್ರೇಗೌಡ, ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ ಬೋರಲಿಂಗಯ್ಯ ಚಾಲನೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರದ ಜಿಲ್ಲಾಧ್ಯಕ್ಷರಾದ ಸು.ತಾ.ರಾಮೇಗೌಡ, ಸಂವಿಧಾನ ಮರುಪಡೆಯುವ ಸಂಸ್ಥೆಯ ಪರವಾಗಿಶ್ರೀ ವಿನಯ್‌ಕುಮಾರ್ ಹಾಗೂ ಜಾನಪದ ಲೋಕದ ಸಿಬ್ಬಂದಿಗಳು ಉಪಸ್ಥಿತರಿದರು.
