ರಾಮನಗರ: ಜನಪದ ಕಲೆಗಳನ್ನು ಮುಂದಿನ ಪೀಳಿಗೆಯವರೆಗೆ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವಶಂಕರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಗಡಿ ಟೌನಿನ ಪುರಸಭೆ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಇಲ್ಲದಿದ್ದರೇ ಬುದಕೇ ಇಲ್ಲ, ಎಲ್ಲಾ ಕಲಾವಿದರನ್ನು ಒಚಿದೆಡೆ ಸೇರಿಸಲು ಜನಪರ ಉತ್ಸವ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದೆ. ಜಿಲ್ಲೆಯ ಎಲ್ಲಾ ಸ್ಥಳದಿಂದಲೂ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ತಿಳಿಸಿದರು. ಎಲ್ಲಾ ಕಲೆಗಳಿಗೆ ಜಾನಪದ ಸಂಸ್ಕೃತಿಯು ತಾಯಿ ಬೇರು ಆಗಿದೆ. ಜನಪದ ಉಳಿಸಿ ಬೆಳೆಸುವುದು ನಾಗರೀಕರ ಕರ್ತವ್ಯವಾಗಿದೆ. ಜನರ ಪದವೇ ಜನಪದ ಎಂದರು.

ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜೊತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ. ಇಂದಿನ ಯುವ ಪೀಳಿಗೆಯು ಶಿಕ್ಷಣದ ಜೊತೆಗೆ ಇಂತಹ ಕಲೆಗಳನ್ನು ಕಲಿತು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರಂಗಹನುಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಯರಾಂ ಸಿ, ಮತ್ತಿಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೆಳ್ಳಿಯಪ್ಪ, ಕೆ.ಪಿ.ಆರ್.ಎಸ್ ಸಂಚಾಲಕರಾದ ವನಜಾ, ಐ.ಎನ್.ಟಿ.ಯು.ಸಿಯ ಪುಷ್ಟ, ದೊಡ್ಡಿ ಲಕ್ಷ?ಮಣ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವ್, ಮಾಗಡಿ ತಾಲ್ಲೂಕಿನ ಕಾಂಗ್ರೆಸ್ಸಿನ ಎಸ್‌ಸಿ/ಎಸ್‌ಟಿ ಅಧ್ಯಕ್ಷರಾದ ಚಿಕ್ಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಮಾಗಡಿ ಪುರಸಭೆ ಪೌರಾಯುಕ್ತರಾದ ಶಿವರುದ್ರಯ್ಯ, ದೊಡ್ಡಬಾಣಗೆರೆ ಮಾರಣ್ಣ, ಪುಟ್ಟಸ್ವಾಮಿ, ಜಿಲ್ಲೆಯ ಕಲಾವಿದರು ಸೇರಿದಂತೆ ಇತರರು ಉಪಸ್ಥಿತರಿದ್ದರು.