ಮಂಗಳೂರು ( ದಕ್ಷಿಣ ಕನ್ನಡ ) ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಲ್ಲಾ ವಸತಿರಹಿತರಿಗೆ ನಿವೇಶನ ನೀಡಲು ಒತ್ತಾಯಿಸಿ ಸುರತ್ಕಲ್ ಇಡ್ಯಾ ಗ್ರಾಮದಲ್ಲಿ ನಿರ್ಮಿಸುತ್ತಿರುವ G+5 ಮಾದರಿ ಮನೆಗಳನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಲು ಆಗ್ರಹಿಸಿ ಮಂಗಳೂರಿನ ಶಕ್ತಿನಗರದಲ್ಲಿ ಮತ್ತು ನಿವೇಶನ ರಹಿತರಿಗಾಗಿ ಮೀಸಲಿರುವ ಎಲ್ಲಾ ಜಾಗಗಳಲ್ಲಿ G+3 ಮಾದರಿ ಮನೆಗಳ ನಿರ್ಮಾಣಕ್ಕೆ ಒತ್ತಾಯಿಸಿ ನಿವೇಶನರಹಿತರಿಂದ ಪ್ರತಿಭಟನೆ ಇಂದು ಮಂಗಳೂರು ಮಹಾನಗರ ಪಾಲಿಕೆ ಎದುರು ನಡೆಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ಮಾತನಾಡುತ್ತಾ ಮಂಗಳೂರಿನ ಭೂಮಿ ಬೆಲೆ ಗಗನಕ್ಕೇರಿದೆ ಬಡವರ ಮನೆ ಕಟ್ಟುವ ಕನಸುಗಳು ನುಚ್ಚು ನೂರಾಗುತ್ತಿದೆ, ಮನೆ ಬಾಡಿಗೆಗೆ ನಿಯಂತ್ರಣಗಳಿಲ್ಲ, ಬಡವರಿಗೆ ನಿವೇಶನ ನೀಡಲು ನಗರದಲ್ಲಿ ಯಾವುದೇ ಯೋಜನೆಗಳಿಲ್ಲ ಜನಪ್ರತಿನಿದಿನಗಳಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಇಂಥ ಸನ್ನಿವೇಶದಲ್ಲಿ ನಿವೇಶನ ರಹಿತರ ಹೋರಾಟ ತೀವ್ರಗೊಳಿಸಬೇಕಿದೆ.
ಮಂಗಳೂರು ನಗರದಲ್ಲಿ ಹತ್ತು ಸಾವಿರಕ್ಕೂ ಅಧಿಕ ನಿವೇಶನ ರಹಿತರಿದ್ದಾರೆ ಕಳೆದ 20ವರ್ಷಗಳಿಂದ ಒಬ್ಬನೇ obba ಬಡವನಿಗೆ ನಿವೇಶನ ನೀಡಿಲ್ಲ ಸುರತ್ಕಲ್ ಇಡ್ಯಾ ಗ್ರಾಮದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಜಿ 3 ಮಾದರಿಯ ವಸತಿ ಸಂಕೀರ್ಣದ ಕಾಮಗಾರಿ ಶಾಸಕ ಭರತ್ ಶೆಟ್ಟಿಯವರ ಇಚ್ಛಾಶಕ್ತಿಯ ಕೊರತೆಯಿಂದ ಸ್ಥಗಿತಗೊಂಡಿದೆ, ಪದವು ಶಕ್ತಿನಗರದಲ್ಲಿ ನಿವೇಶನ ರಹಿತರಿಗೆ ಗುರುತಿಸಲಾಗಿರುವ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದೆ ಶಾಸಕ ವೇದವ್ಯಾಸ್ ಕಾಮತ್ ತನ್ನ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಅವರು ಹೇಳಿದರು.
ಸಿಪಿಐಮ್ ಪಕ್ಷದ ಮುಖಂಡರೂ ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ ಮತ್ತು ಜಯಂತಿ ಬಿ ಶೆಟ್ಟಿ, ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಮಾತನಾಡಿದರು, ಸಿಪಿಐಮ್ ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೇಶನ ರಹಿತರ ಹೋರಾಟ ಸಮಿತಿಯ ಕಾರ್ಯದರ್ಶಿ ಅಸುಂತ ಡಿಸೋಜ ಸ್ವಾಗತಿಸಿದರು, ತಯ್ಯುಬ್ ಬೆಂಗ್ರೆವಂದಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಮ್ ಮುಖಂಡರಾದ ಪ್ರಮೀಳಾ ಕೆ,ರವಿಚಂದ್ರ ಕೊಂಚಾಡಿ, ಅಶೋಕ್ ಶ್ರೀಯಾನ್, ಶಶಿಧರ ಶಕ್ತಿನಗರ, ಭಾರತಿ ಬೋಳಾರ್, ನಾಸಿರ್ ಬಾಸ್ ಬೆಂಗ್ರೆ, ಲೋಕೇಶ್ ಎಂ. ನಾಗೇಶ್ ಕೊಂಚಾಡಿ, ನಾಗೇಶ್ ಬೋಳಾರ್ ಉಪಸ್ಥಿತರಿದ್ದರು