ಹುಣಸೂರು: ತಾಯಿ ಮಕ್ಕಳಿಗೆ ಎದೆ ಹಾಲು ನೀಡಲು ಪೌಷ್ಠಿಕತೆ ಅವಶ್ಯವಿರುವುದರಿಂದ ಪ್ರತಿದಿನ ನಿಯಮಿತ ಆಹಾರ ಸೇವನೆ ಮಾಡುವ ಮುಖೇನಾ ಭವಿಷ್ಯದ ಆರೋಗ್ಯವಂತ ಮಕ್ಕಳ ಜನ್ಮಕ್ಕೆ ಆದ್ಯತೆ ನೀಡಿ ಎಂದು ಇನ್ನಾರು ವೀಲ್ ನ ಅಧ್ಯಕ್ಷೆ ಸ್ಮಿತ ದಯಾನಂದ್ ಕರೆ ನೀಡಿದರು.
ತಾಲೂಕಿನ ಮೂಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರ ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಗರ್ಭಿಣಿ ಸಮಯದಲ್ಲಿ ಉತ್ತಮ ಆಹಾರದ ಜೊತೆಗೆ ಹಣ್ಣು , ತರಕಾರಿ, ಮೊಟ್ಟೆ ಸೇವಿಸಿ ಎಂದು ಸಲಹೆ ನೀಡಿದರು.
ಡಾ.ಸಂಗೀತ ಮಾತನಾಡಿ, ಮಹಿಳೆಯರು ಭೂಮಿತಾಯಿಯಷ್ಟೇ ಶ್ರೇಷ್ಠ ಸ್ಥಾನದಲ್ಲಿದ್ದು, ಮಕ್ಕಳಿಗೆ ಜನ್ಮ ನೀಡುವುದು ವೈಜ್ಞಾನಿಕವಾಗಿ ಅರ್ಥಪೂರ್ಣವಾದ ಸ್ಥಾನವಾಗಿದೆ. ಇದು ಸೂಕ್ಷ್ಮ ಸಮಯ ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದರು.
ಕಾರ್ಯಕ್ರಮದಲ್ಲಿ ಡಾ.ರಾಜೇಶ್ವರಿ, ಕಾರ್ಯದರ್ಶಿ ಜಯಲಕ್ಷ್ಮಿ, ರೋ.ಅಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ಡಾ.ಪ್ರಸನ್ನ, ಇನ್ನಾರ್ ವೀಲ್ ಸದಸ್ಯರಾದ ಅಂಜು ಭವಾನಿ, ಭಾಗ್ಯ, ಅಂಗನವಾಡಿ ಶಿಕ್ಷಕಿ ಮತ್ತು ಮಹಿಳೆಯರು ಇದ್ದರು.