ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಸಿದಂತೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮನೆ ಮೇಲೆ ಇ.ಡಿ ದಾಳಿ ನಡೆದಿದೆ.
ಚೆನ್ನೈ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿರುವ ಅವರ ನಿವಾಸದಲ್ಲಿ ಹಾಗೂ ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜತೆಗೆ ಅವರ ಪುತ್ರ ಹಾಗೂ ಸಂಸದ ಗೌತಮ್ ಸಿಗಮಣಿ ಅವರ ಮನೆಯಲ್ಲೂ ಹುಡುಕಾಟ ನಡೆದಿದೆ.
ಕೇಂದ್ರ ಭದ್ರತಾ ಪಡೆಯ ಜತೆಗೆ ಸೇರಿ ಇ.ಡಿ ಕಾರ್ಯಚರಣೆಯನ್ನು ನಡೆಸುತ್ತಿದೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಂಧನ ಮತ್ತು ಅಬಕಾರಿ ಇಲಾಖೆ ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಮೇಲೆ ಇ.ಡಿ ದಾಳಿ ನಡೆಸಿ, ಅನೇಕ ಕಡೆ ಶೋಧ ಕಾರ್ಯವನ್ನು ನಡೆಸಿತ್ತು. ಅವರ ಆಪ್ತರ ಮೇಲೂ ಇ.ಡಿ ದಾಳಿ ನಡೆಸಿತ್ತು. ಜೂ.14ರಂದು ವಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ಈಗ ತನಿಖೆ ನಡೆಸುತ್ತಿದೆ.