Monday, November 3, 2025
Google search engine

Homeರಾಜ್ಯಸುದ್ದಿಜಾಲಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ: ಅಧಿಕಾರಿಗಳ ಸಭೆಯಲ್ಲಿ ಕುಂದುಕೊರತೆಗಳ ಚರ್ಚೆ

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ: ಅಧಿಕಾರಿಗಳ ಸಭೆಯಲ್ಲಿ ಕುಂದುಕೊರತೆಗಳ ಚರ್ಚೆ

ವರದಿ:ವಿ‌ನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿರುವ ಬಗ್ಗೆ ಸೇರಿದಂತೆ ಅನೇಕ ಕುಂದು ಕೊರತೆಗಳನ್ನು ಸಭೆಯಲ್ಲಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅವಳಿ ತಾಲೂಕುಗಳ ಅಧ್ಯಕ್ಷರಾದ ಎಂ.ಎಸ್.ಮಹದೇವ್ ಮತ್ತು ಉದಯ್ ಶಂಕರ್ ಜಂಟಿಯಾಗಿ ಹೇಳಿದರು.

ಪಟ್ಟಣದ ತಾ.ಪಂ.ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಡಿತರ ಅಂಗಡಿಗಳಲ್ಲಿ ನಿಗದಿತ ಸಮಯಕ್ಕೆ ಪಡಿತರ ವಿತರಣೆ ಮಾಡುತ್ತಿಲ್ಲ, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಲಾಗುತ್ತಿದೆ ಇದಕ್ಕೆ ಸಾಕ್ಷಿ ಮೊನ್ನೆ ಪಟ್ಟಣದ ಖಾಸಗಿ ವ್ಯಕ್ತಿಯೊಬ್ಬರು ಅವರ ಗೊದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ, ರಾಗಿ, ಗೋಧಿಯನ್ನು ದಾಸ್ತಾನು ಮಾಡಿದ್ದು ನೀವೆ ಹಿಡಿದು ಕೇಸು ದಾಖಲಿಸಿದ್ದಿರಿ ಆದರೆ ಎಲ್ಲಿಂದ ಬಂದ ಅಕ್ಕಿ, ಹಾಗು ಗೋಧಿ ಯಾವ ವಿದ್ಯಾರ್ಥಿ ನಿಲಯದು ಎಂಬುದರ ಬಗ್ಗೆ ತನಿಖೆ ಏಕೆ‌ ಮಾಡಿಲ್ಲ, ಜೊತೆಗೆ ಸಂಬಂದಪಟ್ಟ ಅಕ್ಷರದಾಸೋಹ ಇಲಾಖೆಯವರಿಗೆ ದೂರು ನೀಡಿಲ್ಲ ಎಂದು ಗ್ಯಾರಂಟಿ ಸದಸ್ಯರಾದ ಗಂಧನಹಳ್ಳಿ ಹೇಮಂತ್, ಮಹಾಲಿಂಗ, , ಚೇತನ್ ಸೇರಿದಂತೆ ಕೆಲವುದು ಈ ಬಗ್ಗೆ ದ್ವನಿ ಎತ್ತಿದಾಗ ಇದಕ್ಕೆ ಉತ್ತರಿಸಲಾಗದೇ ಆಹಾರ ಇಲಾಖೆ ಶಿರಾಸ್ತೇದಾರ್ ಮಂಜುನಾಥ್ ತಡಬಡಾಯಿಸಿದರು. ಈ ಸಂಬಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಸಮಜಾಯಿಷಿ ಉತ್ತರ ನೀಡಿದಾಗ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ತರಾಟೆ ತೆಗೆದು ಕೊಂಡರು.

ವಿದ್ಯುತ್ ಟ್ರಾನ್ಸ್ ಪಾರ್ಮರ್ ಆವಳಡಿಸಿರುವ ಸುತ್ತಾ ರಕ್ಷಣೆಗಾಗಿ ತಂತಿಬೇಲಿ ಅಥವಾ ಮೆಸ್ ಏಕೆ ನಿರ್ಮಿಸಿಲ್ಲ ಇದರಿಂದಾಗಿ ಕುರಿ, ಜಾನುವಾರುಗಳು ಸಾವನ್ನಪ್ಪಿದ್ದು ಇದಕ್ಕೆ ಯಾರು ಹೊಣೆ ಎಂದು ಗ್ಯಾರಂಟಿ ಅನುಷ್ಠಾನ ಸದಸ್ಯರು ಚೆಸ್ಕಾಂ ಅಧಿಕಾರಿಗಳನ್ಬು ತೀವ್ರ ತರಾಟೆ ತೆಗೆದುಕೊಂಡರು.

ಶಕ್ತಿ ಯೋಜನೆಯಡಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಗ್ಯಾರಂಟಿ ಯೋಜನೆ ಅಧ್ಯಕ್ಷರುಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಘಟಕದ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಅನಾನುಕೂಲವಾಗದಂತೆ ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.

ಯುವ ನಿಧಿ ಹಾಗೂ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಹಣವನ್ನು ಸಮರ್ಪಕವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಯುವ ನಿಧಿ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.

ತಾ.ಪಂ.ಇಓಗಳಾದ ವಿ.ಪಿ.ಕುಲದೀಪ್, ಎ.ರವಿ. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಯ್ಯದ್ದ್ ಜಾಬೀರ್, ಗಂಧನಹಳ್ಳಿ ಹೇಮಂತ್, ಹೊಸ ಅಗ್ರಹಾರ ಚೇತನ್, ಕೆಂಚಿಮಂಜು, ಮೋಹನ್ ದೇವರಹಟ್ಟಿ, ಮಹಾಲಿಂಗ, ಲತಾಮಣಿ, ಬಾವುಟ ಕುಮಾರ್, ಯತಿರಾಜ್, ಅಂಕನಹಳ್ಳಿ ಮೋಹನ್, ವಾಸೀಂ ಪಾಷ ,‌ಸಿಡಿಪಿಓ ಅಣ್ಣಯ್ಯ, ಚೆಸ್ಕಾಂ ಎಇಇ ಗಳಾದ ಅರ್ಕೇಶ್ ಮೂರ್ತಿ, ಮಧುಸೂದನ್, ಕೆ.ಎಸ್.ಆರ್.ಟಿಸಿ ಸಂಚಾರಿ ನಿರೀಕ್ಷಣಾಧಿಕಾರಿ ಎಂ.ಸುರೇಶ್, ತಾ.ಪಂ.ವ್ಯವಸ್ಥಾಪಕ ಸತೀಶ್, ಮೇಲ್ವಿಚಾರಕ ಕರೀಗೌಡ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular