ಬೆಟ್ಟದಪುರ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಜೊತೆಗೆ ನ್ಯಾಯಬೆಲೆ ಅಂಗಡಿಯನ್ನು ಮಾಡಿಸುವ ಉದ್ದೇಶವನ್ನು ಸಂಬಂಧಪಟ್ಟ ಸಚಿವರೊಂದಿಗೆ (ಕೆ.ವೆಂಕಟೇಶ್) ಚರ್ಚಿಸಿ ಮಂಜೂರು ಮಾಡಿಸಲು ಶ್ರಮ ವಹಿಸಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸಾಲುಕೊಪ್ಪಲು ಪುಟ್ಟರಾಜು ತಿಳಿಸಿದರು.
ಸಮೀಪದ ಸಾಲುಕೊಪ್ಪಲು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಚಿಕ್ಕ ಗ್ರಾಮವಾದರು ನಮ್ಮ ಸಂಘಕ್ಕೆ ಸ್ವಂತ ಕಟ್ಟಡವನ್ನು ಕಟ್ಟಿಸಿದ್ದೇವೆ, ಇದರೊಂದಿಗೆ ಮೊದಲ ಮಹಡಿಯಲ್ಲಿ ಸಭೆ, ಸಮಾರಂಭಗಳನ್ನು ನಡೆಸಲು ಕಟ್ಟಡವನ್ನು ಮಾಡಿಸಿಕೊಡಬೇಕೆಂದು ಮೈಮುಲ್ ನಿರ್ದೇಶಕ ಪ್ರಕಾಶ್ ರವರಿಗೆ ಮನವಿ ಸಲ್ಲಿಸಲಾಗಿದೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ, ಸಂಘ ಪ್ರಾರಂಭವಾದಾಗಿನಿಂದ ಯಾವುದೇ ಚುನಾವಣೆಗಳನ್ನು ನಡೆಸದೆ ಅವಿರೋಧವಾಗಿ ಆಯ್ಕೆ ಮಾಡುತ್ತಿರುವುದರಿಂದ ನಮ್ಮ ಸಂಘವು ಯಾವುದೇ ರೀತಿಯ ಅನಗತ್ಯ ವೆಚ್ಚಗಳಿಗೆ ಆಸ್ಪದ ನೀಡದೆ, ಸಂಘದ ಅಭಿವೃದ್ಧಿಗೆ ಮಾತ್ರ ಶ್ರಮಿಸಿದ್ದೇವೆ ಎಂದರು.
ವಿಸ್ತರಣಾಧಿಕಾರಿ ಶ್ರೀಕಾಂತ್ ಮಾತನಾಡಿ ಗುಣಮಟ್ಟದ ಹಾಲು ಸರಬರಾಜುವಿನಿಂದ ಸಂಸ್ಥೆಗೆ ₹1.34 ಲಕ್ಷ ನಿವ್ವಳ ಆದಾಯ ಗಳಿಸಿದೆ, ಈ ಸಂಘದಲ್ಲಿ ಚಾಪರ್ ಕಟಿಂಗ್ ಮಿಷಿನ್ ಹಾಗೂ ಹಸುಗಳಿಗೆ ಮ್ಯಾಟ್ ಕೊಡಿಸುವಂತೆ ಮನವಿ ಮಾಡಲಾಗಿತ್ತು, ಅದೇ ರೀತಿ ಎಲ್ಲಾ ಉತ್ಪಾದಕರಿಗೂ ಈ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಇದೆ ವೇಳೆ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಪವಿತ್ರಾ,ಯಶೋಧಮ್ಮ, ಸಾಕಮ್ಮ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಜಯಮ್ಮ, ಉಪಾಧ್ಯಕ್ಷ ಶ್ವೇತಾ ನಿರ್ದೇಶಕರಾದ ರಾಣಿ, ವಸಂತಮ್ಮ, ಜಯಮ್ಮ, ಪಾರ್ವತಮ್ಮ, ಸಾವಿತ್ರಿ, ನಾಗಮ್ಮ, ಮಹದೇವಮ್ಮ, ಮುಖ್ಯ ಕಾರ್ಯನಿರ್ವಣಾಧಿಕಾರಿ ಸೌಮ್ಯ, ಸಿಬ್ಬಂದಿ ಮೀನಾ, ಮುಖಂಡರಾದ ಅಣ್ಣೇಗೌಡ, ಜವರೇಗೌಡ, ತಮ್ಮಯ್ಯ ನಾಯಕ್, ಲೋಕೇಶ್, ಈರೇಗೌಡ, ಪುಟ್ಟಣ್ಣಯ್ಯಗೌಡ, ಮಹದೇವ ನಾಯಕ್, ನಟರಾಜು, ಕೆಂಚೇಗೌಡ, ಜಯಣ್ಣೇಗೌಡ ಭಾಗವಹಿಸಿದ್ದರು.